ಕಲಬುರಗಿ: ಆಟೊದಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯ ಚಿನ್ನದ ಚೈನ್, ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗ್ ಅನ್ನು ಬೈಕ್ ಮೇಲೆ ಬಂದ ಅಪರಿಚಿತರು ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಗರದ ಜೇವರ್ಗಿ ರಸ್ತೆಯ ಮೇಲ್ಸೇತುವೆ ಹತ್ತಿರ ನಡೆದಿದೆ.

ಬಿದ್ದಾಪುರ ಕಾಲೊನಿಯ ಶಿಕ್ಷಕಿ ಗಾಯಿತ್ರಿ ಕಿರಣಕುಮಾರ ಕುಲಕರ್ಣಿ ವ್ಯಾನಿಟಿ ಬ್ಯಾಗ್ ಕಳೆದುಕೊಂಡವರು. ಬ್ರಹ್ಮಪುರದ ಸಂಬಂಧಿಕರ ಉಪನಯನ ಕಾರ್ಯಕ್ರಮ ಮುಗಿಸಿಕೊಂಡು ಆಟೊದಲ್ಲಿ ಮನೆಗೆ ಹೊರಟಾಗ ರಾತ್ರಿ 9.40ರ ಸುಮಾರಿಗೆ ಘಟನೆ ಸಂಭವಿಸಿದೆ. ಬೈಕ್ನಲ್ಲಿ ಬಂದ ಮೂವರು ಅಪರಿಚಿತರು ಆಟೊದಲ್ಲಿಟ್ಟುಕೊಂಡಿದ್ದ ವ್ಯಾನಿಟಿ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾರೆ.

‘ವ್ಯಾನಿಟಿ ಬ್ಯಾಗ್ನಲ್ಲಿ 10 ಗ್ರಾಂ. ಮತ್ತು 12 ಗ್ರಾಂ.ನ ಎರಡು ಬಂಗಾರದ ಚೈನ್ಗಳು, ಒಂದು ಮೊಬೈಲ್ ಹಾಗೂ ₹1 ಸಾವಿರ ನಗದು ಇತ್ತು’ ಎಂದು ಶಿಕ್ಷಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಲಾರಿ ಡಿಕ್ಕಿ: ಆಟೊ ಚಾಲಕ ಸಾವು

ಕಲಬುರಗಿ: ಲಾರಿ ಡಿಕ್ಕಿಯಾಗಿ ಆಟೊ ಚಾಲಕ ಮೃತಪಟ್ಟಿರುವ ಘಟನೆ ಸುಲ್ತಾನಪುರ ರಿಂಗ್ ರಸ್ತೆ ಸಮೀಪದ ಮಣಿಕಂಠ ವಾಟರ್ ಪ್ಲಾಂಟ್ ಹತ್ತಿರ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಕಲಬುರಗಿ ತಾಲ್ಲೂಕಿನ ತಾಜಸುಲ್ತಾನಪುರದ ರೇವಣಸಿದ್ದಪ್ಪ ಬೀರನಳ್ಳಿ ಮೃತರು. ಆಟೊದಲ್ಲಿದ್ದ ಪ್ರಯಾಣಿಕ ನಾಗೇಶ ಅಂಕಮರಾವ ಅವರಿಗೆ ಗಾಯಗಳಾಗಿವೆ.

ಈ ಕುರಿತು ಮೃತನ ಪುತ್ರ ಅನೀಲಕುಮಾರ ಬೀರನಳ್ಳಿ ನೀಡಿದ ದೂರಿನ ಮೇರೆಗೆ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.