ಕಾಳಗಿ, ಶಹಾಬಾದ್‌ನಲ್ಲಿ ಕುಸಿತ!
ಭರಪೂರ ಮಳೆಯ ಹೊರತಾಗಿಯೂ ಜಿಲ್ಲೆಯ ಕಾಳಗಿ ಹಾಗೂ ಶಹಾಬಾದ್ ತಾಲ್ಲೂಕುಗಳಲ್ಲಿ ಅಂತರ್ಜಲಮಟ್ಟ ಕುಸಿತ ಕಂಡಿದೆ. 2024ರ ಸೆಪ್ಟೆಂಬರ್‌ನಲ್ಲಿ ಕಾಳಗಿಯಲ್ಲಿ ಭೂಮಿಯ 1.61 ಮೀಟರ್ ಹಾಗೂ ಶಹಾಬಾದ್‌ನಲ್ಲಿ 2.03 ಮೀಟರ್ ಆಳದಲ್ಲಿ ಜೀವಜಲ ಸಿಗುತ್ತಿತ್ತು. 2025ರ ಸೆಪ್ಟೆಂಬರ್‌ನಲ್ಲಿ ಕಾಳಗಿಯಲ್ಲಿ ಅಂತರ್ಜಲಮಟ್ಟವು 1.61 ಮೀಟರ್‌ನಿಂದ 1.83 ಮೀಟರ್‌ಗೆ ಕುಸಿದಿದೆ. ಶಹಾಬಾದ್‌ನಲ್ಲಿ ಭೂ ಒಳಲಾಳದ ನೀರಿನಮಟ್ಟ 2.03 ಮೀಟರ್‌ನಿಂದ 2.75 ಮೀಟರ್‌ಗೆ ಕುಸಿದಿದೆ.