ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ವನ್ಯಜೀವಿ ಧಾಮದ ಚಂದ್ರಂಪಳ್ಳಿ ಬೀಟ್‌ನಲ್ಲಿ ಬರುವ ದೊಡ್ಡಗುಂಡಲ ನಾಲಾದಲ್ಲಿ ದೊಡ್ಡ ಬಂಡೆಯ ಮೇಲಿನಿಂದ ಹರಿಯುವ ನೀರು ಪರಿಸರ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ತಾಲ್ಲೂಕಿನ ತಡವಾಗಿ ಮಳೆಯಾದರೂ ಕೂಡ ಚಿಂಚೋಳಿ ಹೋಬಳಿಯಲ್ಲಿ ಮಳೆಯ ಕೊರತೆಯಿರಲಿಲ್ಲ. ಇದರಿಂದ ಕಳೆದ ವಾರ ಸುರಿದ ವರ್ಷಧಾರೆಗೆ ಜಲಪಾತಗಳು, ಜಲಧಾರೆಗಳು ಪ್ರಕೃತಿಯ ರಮಣೀಯತೆ ಹೆಚ್ಚಿಸಿದೆ.

ದೊಡ್ಡ ಗುಂಡಲ ನಾಲಾದಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ. ಜಲಧಾರೆ ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಇಲ್ಲಿವರೆಗೆ ಎತ್ತಿಪೋತೆ, ಮಾಣಿಕಪುರ, ಭೋಗಾನಿಂಗದಳ್ಳಿ ಜಲಪಾತಗಳಲ್ಲಿ ನೀರಿನ ಭೋರ್ಗರೆತ ಕಾಣಸಿದರೆ ದೊಡ್ಡಗುಂಡಲ ನಾಲಾ ಜಲಧಾರೆ ಇದಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.