ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇಡಂ | ಟಾಟಾ ಏಸ್-ಲಾರಿ ನಡುವೆ ಡಿಕ್ಕಿ: ಸ್ಥಳದಲ್ಲೇ ಚಾಲಕ ಸಾವು

Published 1 ಜೂನ್ 2024, 9:04 IST
Last Updated 1 ಜೂನ್ 2024, 9:04 IST
ಅಕ್ಷರ ಗಾತ್ರ

ಸೇಡಂ (ಕಲಬುರಗಿ ಜಿಲ್ಲೆ): ಸೇಡಂ ಹೊರವಲಯದ ಕಲಬುರಗಿ-ಸೇಡಂ ರಸ್ತೆಯಲ್ಲಿ ಶನಿವಾರ ಟಾಟಾ ಏಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಟಾಟಾ ಏಸ್ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸೇಡಂ ಪಟ್ಟಣದ ಬಸವ ನಗರದ ನಿವಾಸಿ ಬಸವರಾಜ ಲಕ್ಷ್ಮಣ ಹುಳಗೋಳ (24) ಮೃತ ಚಾಲಕ.

ಬಸವರಾಜ ಅವರು ಟಾಟಾ ಏಸ್ ವಾಹನದಲ್ಲಿ ತರಕಾರಿ ತುಂಬಿಕೊಂಡು ಕಲಬುರಗಿಯಿಂದ ಸೇಡಂ ಕಡೆಗೆ ತೆರಳುತ್ತಿದ್ದರು. ಕಲಬುರಗಿಯತ್ತ ಹೋಗುತ್ತಿದ್ದ ಲಾರಿಯೊಂದು ಬಸವರಾಜ ಚಲಾಯಿಸುತ್ತಿದ್ದ ವಾಹನಕ್ಕೆ ಡಿಕ್ಕೆ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ‌ ಮತ್ತು ಟಾಟಾ ಏಸ್ ಮುಂಭಾಗ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಸ್ಥಳಕ್ಕೆ ಸೇಡಂ ಸಿಪಿಐ ಮಂಜುನಾಥ ಸೆಲ್ವೇರಿ, ಕ್ರೈಮ್ ಪಿಎಸ್ಐ ಚಂದ್ರಶೇಖರ, ಬಾಲಕೃಷ್ಣರೆಡ್ಡಿ ಅವರು ಭೇಟಿ ನೀಡಿದರು. ರಸ್ತೆ ಮಧ್ಯೆ ಬಿದ್ದ ವಾಹನಗಳನ್ನು ಪಕ್ಕಕ್ಕೆ ಸ್ಥಳಾಂತರಿಸಿ ಕಲಬುರಗಿ-ಸೇಡಂ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT