ಕಲಬುರಗಿ: ಮನೆಯ ಮುಂದೆ ಆಡುತ್ತಿದ್ದಾಗ ಹಾವು ಕಚ್ಚಿದ ಪರಿಣಾಮ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ತಾಲ್ಲೂಕಿನ ಸಿಂದಗಿ(ಬಿ) ಗ್ರಾಮದ ನಿವಾಸಿ ಶಿವಕುಮಾರ ಬಬಲಾದಿ ಅವರ ಪುತ್ರಿ ಭವ್ಯಾ ಅಲಿಯಾಸ್ ಅನ್ವಿತಾ (3) ಮೃತ ಬಾಲಕಿ.

‘ಫೆ.22ರಂದು ಬೆಳಿಗ್ಗೆ 9 ಗಂಟೆ ಹೊತ್ತಿಗೆ ಭವ್ಯಾ ಮನೆಯ ಎದುರು ಆಡುತ್ತಿದ್ದಳು. ಒಮ್ಮೆಲೇ ಅಳುತ್ತ ಒಳಗೆ ಬಂದು ತನ್ನ ಬಲಗಾಲು ತೋರಿಸಿದಳು. ಹಿಮ್ಮಡಿ ಭಾಗದಲ್ಲಿ ರಕ್ತ ಬರುತ್ತಿತ್ತು. ಹೊರಗೆ ಹೋಗಿ ನೋಡಿದಾಗ ಹಾವು ಕಾಣಿಸಿತು. ಕೂಡಲೇ ಅವಳನ್ನು ಬಸ್ ನಿಲ್ದಾಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವಳು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಿವಕುಮಾರ ತಿಳಿಸಿದ್ದಾರೆ.

ಈ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ‘ಮ್ಯೂಲ್ ಅಕೌಂಟ್’ ಪತ್ತೆ

ಕಲಬುರಗಿ: ಬೆಂಗಳೂರಿನ ಸೈಬರ್ ಕಮಾಂಡ್ ಘಟಕದ ಸೂಚನೆಯಂತೆ ಕಾರ್ಯಾಚರಣೆ ನಡೆಸಿರುವ ನಗರ ಸೈಬರ್ ಕ್ರೈಂ ಠಾಣೆ ಪೊಲೀಸರು, ಮತ್ತೊಂದು ‘ಮ್ಯೂಲ್ ಅಕೌಂಟ್’ (ನಕಲಿ ಖಾತೆ) ಪತ್ತೆ ಮಾಡಿದ್ದಾರೆ.

ನಗರದ ಮಹಡಿ ಮೊಹಲ್ಲಾದ ಮುಜತಬಾ ಅಹ್ಮದ್ ಎಂಬಾತನಿಗೆ ಸೇರಿದ ಈ ಖಾತೆಯ ವಿರುದ್ಧ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ನಲ್ಲಿ (ಎನ್ಸಿಆರ್ಪಿ) 13 ಪ್ರಕರಣಗಳು ದಾಖಲಾಗಿವೆ. 2024ರ ಜೂನ್ 28ರಿಂದ 2024ರ ನವೆಂಬರ್ 14ರ ಅವಧಿಯಲ್ಲಿ ಒಟ್ಟು ₹26.41 ಲಕ್ಷ ವಂಚಿಸಿದ ಆರೋಪವಿದೆ.

ಕಲಬುರಗಿ ನಗರ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.