ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ | ನಾಯಿ ಕಡಿತ: ಪರಿಹಾರದ ಚೆಕ್ ವಿತರಣೆ

Published 20 ಮಾರ್ಚ್ 2024, 15:30 IST
Last Updated 20 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಚಿತ್ತಾಪುರ: ಪುರಸಭೆ ವ್ಯಾಪ್ತಿಯ ವಾರ್ಡ್ 9ರಲ್ಲಿನ ನಾಗಾವಿ ಚೌಕ್ ಹತ್ತಿರ ನಾಯಿಯೊಂದು ಕಚ್ಚಿದ್ದರಿಂದ ಗಾಯಗೊಂಡಿದ್ದ ಮೂವರು ಸಂತ್ರಸ್ತರಿಗೆ ಪುರಸಭೆಯಿಂದ ತಲಾ ₹5 ಸಾವಿರ ಮೊತ್ತದ ಚೆಕ್ ಅನ್ನು ಪುರಸಭೆ ಮುಖ್ಯಾಧಿಕಾರಿ ಸಂಜೀವ ಮಾಂಗ ಬುಧವಾರ ವಿತರಣೆ ಮಾಡಿದರು.

ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡು ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಚೇತನಕುಮಾರ ಹಣಮಂತ, ಅಂಬರೀಶ ಈರಪ್ಪ, ಮಾಣಿಕಮ್ಮ ಭೀಮಣ್ಣ ಅವರಿಗೆ ತಲಾ ₹5 ಸಾವಿರ ಮೊತ್ತದ ಪರಿಹಾರದ ಚೆಕ್ ವಿತರಿಸಿದರು.

‘ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಹಾಗೂ ಕಡಿತದ ದೂರು ಕೇಳಿ ಬಂದಿವೆ. ನಾಯಿ ಹಾವಳಿಗೆ ಕಡಿವಾಣ ಹಾಕಲು ಪಶು ಇಲಾಖೆಯ ಅಧಿಕಾರಿಯೊಂದಿಗೆ ಸಮಾಲೋಚನೆ ನಡೆಸಲಾಗುವುದು. ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಗೆಂದು ಪಶು ಇಲಾಖೆಯಿಂದ ₹30 ಲಕ್ಷ ವೆಚ್ಚದ ಅಂದಾಜು ಪಟ್ಟಿ ಸಲ್ಲಿಸಲಾಗಿದೆ. ಈ ಕುರಿತು ಮೇಲಧಿಕಾರಿಗೆ ಪತ್ರ ಬರೆದು ಅನುದಾನದ ವ್ಯವಸ್ಥೆಗೆ ಮನವಿ ಮಾಡುತ್ತೇವೆ’ ಎಂದು ಮುಖ್ಯಾಧಿಕಾರಿ ಸಂಜೀವ ಮಾಂಗ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT