ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | 18–20 ಕಿ.ಮೀ ದೂರ ತೆರಳಿ ಮತದಾನ !

Published 8 ಮೇ 2024, 5:48 IST
Last Updated 8 ಮೇ 2024, 5:48 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಗಡಿಲಿಂಗದಳ್ಳಿ ಗ್ರಾಮ(ಹಳೆ ಊರಿನ)ದ ಮತದಾರರು ಹೊಸ ಊರು ಮಾರ್ಗವಾಗಿ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರ-2ರಲ್ಲಿರುವ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿದರು.

ಕ್ರೂಸರ್‌ನಲ್ಲಿ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರ-1ರ ಮಾರ್ಗವಾಗಿ ಪುನರ್ ವಸತಿ ಕೇಂದ್ರ-2ರ ಮತಗಟ್ಟೆಗೆ ಸುಮಾರು 20 ಕಿ.ಮೀ ದೂರ ಕ್ರಮಿಸಿ ಮತದಾನ ಮಾಡಿದರು. ಪುನರ್ ವಸತಿ ಕೇಂದ್ರ -1ರಲ್ಲಿ ಮತಗಟ್ಟೆಯಿಲ್ಲದ ಕಾರಣ 100ಕ್ಕೂ ಹೆಚ್ಚು ಮತದಾರರು 16 ಕಿ.ಮೀ ದೂರದ ಪುನರ್ ವಸತಿ ಕೇಂದ್ರ-2ರ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಪುನರ್ ವಸತಿ ಕೇಂದ್ರ-2 ನಿವಾಸಿಗಳು ಹಳೆ ಊರಿನ(ಪುನರ್ ವಸತಿ ಕೇಂದ್ರ-3) ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

‘ಗ್ರಾಮವನ್ನು ಮೂರು ಪುನರ್ ವಸತಿ ಕೇಂದ್ರಗಳಾಗಿ ವಿಭಜಿಸಲಾಗಿದೆ. ಇದರಲ್ಲಿ ಪುನರ್ ವಸತಿ ಕೇಂದ್ರ-2 ಮತ್ತು 3ರಲ್ಲಿ ಮಾತ್ರ ಮತಗಟ್ಟೆ ಸ್ಥಾಪಿಸಲಾಗಿದೆ. ಪುನರ್ ವಸತಿ ಕೇಂದ್ರ-1ರಲ್ಲಿ ಮತಗಟ್ಟೆ ಇಲ್ಲದ ಕಾರಣ ಅವರು ಪುನರ್ ವಸತಿ ಕೇಂದ್ರ-2 ಮತ್ತು 3ಕ್ಕೆ ತೆರಳಿ ಮತಚಲಾಯಿಸಿದ್ದಾರೆ’ ಗ್ರಾ.ಪಂ. ಸದಸ್ಯ ಗೌರಿಶಂಕರ ಉಪ್ಪಿನ್ ತಿಳಿಸಿದರು.

ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯ ಧಾವಜಿ ನಾಯಕ ತಾಂಡಾದ ಜನರು ಕ್ರೂಸರ್ ವಾಹನದಲ್ಲಿ ನರನಾಳ, ರಾಣಾಪುರ ಕ್ರಾಸ್, ಸಾಸರಗಾಂವ್ ಕ್ರಾಸ್, ರುಮ್ಮನಗೂಡ ಮೂಲಕ ಮೋಘಾ ಗ್ರಾಮದ ಮತಗಟ್ಟೆಗೆ ಸುಮಾರು 18 ಕಿ.ಮೀ ದೂರ ಕ್ರಮಿಸಿ ಮತ ಚಲಾಯಿಸಿದರು.  ಇಲ್ಲಿ 218 ಮತದಾರರಿದ್ದು ತಾಂಡಾದಿಂದ ಮತಗಟ್ಟೆಯಿರುವ ಮೋಘಾ ಗ್ರಾಮಕ್ಕೆ ನೇರ ಸಂಪರ್ಕ ರಸ್ತೆ ಇಲ್ಲದ ಕಾರಣ ಬೇರೆ ರಸ್ತೆ ಸುತ್ತಿ ಗ್ರಾಮ ತಲುಪುವುದು ಇವರಿಗೂ ಅನಿವಾರ್ಯವಾಗಿದೆ.

‘ನಮ್ಮ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸುವಂತೆ ತಾವು ಮಾಡಿದ ಮನವಿಗೆ ಚುನಾವಣೆ ಆಯೋಗ ಮತ್ತು ಜಿಲ್ಲಾಧಿಕಾರಿಗಳು ಸ್ಪಂದಿಸಿಲ್ಲ’ ಎಂದು ತಾಂಡಾದ ಬಿಜೆಪಿ ಮುಖಂಡ ನೀಲಕಂಠ ಚವ್ಹಾಣ ಪ್ರಜಾವಾಣಿಗೆ ತಿಳಿಸಿದರು.

ಇದಲ್ಲದೇ ಗಡಿಲಿಂಗದಳ್ಳಿಯ ಬಳಿಯ ಅಣದು ನಾಯಕ ತಾಂಡಾದ ಜನರು ಪುನರ್ ವಸತಿ ಕೇಂದ್ರ-3ರ ಮತಗಟ್ಟೆ ಕೇವಲ 1 ಕೀ. ಮೀ ಅಂತರದಲ್ಲಿದ್ದರೂ ಮತಗಟ್ಟೆ ಶಿವರಾಮ ನಾಯಕ ತಾಂಡಾದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಇದು ಸುಮಾರು 8ರಿಂದ 10 ಕಿ.ಮೀ ದೂರ ಎಂದು ಹೇಮ್ಲಾನಾಯಕ ವಿಜಯಕುಮಾರ ಜಾಧವ ಪ್ರಜಾವಾಣಿಗೆ ತಿಳಿಸಿದರು.

ಶೇರಿ ಭೀಕನಳ್ಳಿ ತಾಂಡಾವಾಸಿಗಳು 4 ಕಿ.ಮೀ ದೂರದ ಧರ್ಮಾಸಾಗರಕ್ಕೆ, ಮಂಡಗೋಳ, ತಾಂಡಾ ಜನರು 4 ಕಿ.ಮೀ ದೂರದ ಖೂನಿ ತಾಂಡಾ ಮತಟಗಟೆಯಲ್ಲಿ ಮತ ಚಲಾಯಿಸಿದರು.

ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಧಾವಜಿ ನಾಯಕ ತಾಂಡಾದ ಜನರು ಮೋಘಾ ಮತಗಟ್ಟೆಯಲ್ಲಿ ಹಕ್ಕುಚಲಾಯಿಸಲು ಕ್ರೂಸರ್‌ನಲ್ಲಿ ಪ್ರಯಾಣಿಸಿದರು
ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಧಾವಜಿ ನಾಯಕ ತಾಂಡಾದ ಜನರು ಮೋಘಾ ಮತಗಟ್ಟೆಯಲ್ಲಿ ಹಕ್ಕುಚಲಾಯಿಸಲು ಕ್ರೂಸರ್‌ನಲ್ಲಿ ಪ್ರಯಾಣಿಸಿದರು
ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರದ ಮತದಾರರು 20 ಕಿ.ಮೀ ದೂರದ ಮತಗಟ್ಟೆಗೆ ಕ್ರೂಸರ್‌ನಲ್ಲಿ ತೆರಳಿ ಮತದಾನ ಮಾಡಿದರು
ಚಿಂಚೋಳಿ ತಾಲ್ಲೂಕಿನ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರದ ಮತದಾರರು 20 ಕಿ.ಮೀ ದೂರದ ಮತಗಟ್ಟೆಗೆ ಕ್ರೂಸರ್‌ನಲ್ಲಿ ತೆರಳಿ ಮತದಾನ ಮಾಡಿದರು

Quote - ನಮ್ಮ ತಾಂಡಾದಲ್ಲಿ 160ಕ್ಕೂ ಹೆಚ್ಚು ಮತದಾರರಿದ್ದಾರೆ. ನಮ್ಮನ್ನು ಸಮೀಪದ ಗಡಿಲಿಂಗದಳ್ಳಿ ಪುನರ್ ವಸತಿ ಕೇಂದ್ರ-3ರ ಮತಗಟ್ಟೆಗೆ ಜೋಡಿಸಿ ಇಲ್ಲವೇ ನಮ್ಮಲ್ಲೇ ಮತಗಟ್ಟೆ ಸ್ಥಾಪಿಸಿ ಗುಂಡಿಬಾಯಿ ರಾಠೋಡ್ ಅಣದು ನಾಯಕ ತಾಂಡಾ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT