ಬಡವರ ನೆರವಿಗೆ ‘ಅನುಕಂಪದ ಗೋಡೆ’

7
ಇನ್ನರ್‌ವ್ಹೀಲ್‌ ಕ್ಲಬ್‌ ಆಫ್‌ ಗುಲಬರ್ಗಾ ಸನ್‌ ಸಿಟಿಯ ಮಾನವೀಯ ಸೇವೆ

ಬಡವರ ನೆರವಿಗೆ ‘ಅನುಕಂಪದ ಗೋಡೆ’

Published:
Updated:
Deccan Herald

ಕಲಬುರ್ಗಿ: ಕಡುಬಡವರು, ನಿರ್ಗತಿಕರು ಬಟ್ಟೆ ಹಾಗೂ ದಿನಬಳಕೆಯ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಇನ್ನರ್‌ವ್ಹೀಲ್‌ ಕ್ಲಬ್‌ ಆಫ್‌ ಗುಲಬರ್ಗಾ ಸನ್‌ ಸಿಟಿಯವರು ‘ಅನುಕಂಪದ ಗೋಡೆ’ಯನ್ನು ಆರಂಭಿಸಿದ್ದಾರೆ.

ಇಲ್ಲಿಯ ಗಂಜ್‌ ಪ್ರದೇಶದ ನಗರೇಶ್ವರ ಶಾಲೆಯ ಗೋಡೆಗೆ ಹೊಂದಿಕೊಂಡು ಇದು ತಲೆ ಎತ್ತಿದೆ.

ತಮಗೆ ಬೇಡವಾಗಿರುವ ಬಟ್ಟೆ, ಪಾತ್ರೆ ಮತ್ತಿತರ ವಸ್ತುಗಳನ್ನು ಸಾರ್ವಜನಿಕರು ಇಲ್ಲಿ ತಂದು ಇಡಬೇಕು. ಆದರೆ, ಅವು ಸುಸ್ಥಿತಿಯಲ್ಲಿ ಇರಬೇಕು. ಅವಶ್ಯವಿದ್ದವರು ಅವುಗಳನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಇದು ‘ಅನುಕಂಪದ ಗೋಡೆ’ಯ ಪರಿಕಲ್ಪನೆ.

ಕ್ಲಬ್‌ ಸದಸ್ಯರೇ ಸದ್ಯ ಇಲ್ಲಿ ಪ್ಯಾಂಟ್‌, ಅಂಗಿ, ಸೀರೆ, ಮಕ್ಕಳ ಬಟ್ಟೆ, ಫರ್ಸ್‌ಗಳನ್ನು ತಂದು ಇಟ್ಟಿದ್ದಾರೆ.

ನಗರೇಶ್ವರ ವೆಲ್ಫೆರ್‌ ಸೊಸೈಟಿ ಅಧ್ಯಕ್ಷ, ಉದ್ಯಮಿ ರಾಘವೇಂದ್ರ ಮೈಲಾಪುರ, ಕಾರ್ಯದರ್ಶಿ ರವೀಂದ್ರ ಮುಕ್ಕಾ ಅವರು ಇದಕ್ಕೆ ಸಹಕಾರ ನೀಡಿದ್ದಾರೆ. ಬಟ್ಟೆ, ವಸ್ತುಗಳನ್ನು ಇಡಲು ಅಂದಾಜು ₹25 ಸಾವಿರ ವೆಚ್ಚದಲ್ಲಿ ಸುರೇಂದರ್‌ ವೀರಸಿಂಗ್‌ ಛಾಬ್ರಾ ಅವರು ರ‍್ಯಾಕ್‌ ನಿರ್ಮಿಸಿಕೊಟ್ಟಿದ್ದಾರೆ.

ಉದ್ಘಾಟನೆ: ಶನಿವಾರ ಇದನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌, ‘ಇದೊಂದು ಬಗೆಯ ಸಮಾಜ ಸೇವೆ. ಉಳ್ಳವರು ಇಲ್ಲದವರಿಗೆ ನೆರವು ನೀಡಿದರೆ ಬಡವರು ಭಿಕ್ಷೆ ಬೇಡುವುದು ತಪ್ಪುತ್ತದೆ. ಕಳ್ಳತನ ಪ್ರಕರಣ ಕಡಿಮೆಯಾಗುತ್ತವೆ’ ಎಂದರು.

ಕ್ಲಬ್‌ ಅಧ್ಯಕ್ಷೆ ತೃಪ್ತಿ ಶಹಾ, ಪದಾಧಿಕಾರಿಗಳಾದ ಪಲ್ಲವಿ ಮುಕ್ಕಾ, ಅನಿತಾ ಮಾಲಿ, ಮಾನಸಾ ಸೋನಿ, ಸುನೀತಾ ಬೋರಾ, ರಜನಿ ಗುಪ್ತಾ, ಪುಷ್ಪಲ್‌ ಕೌರ್‌, ಪ್ರಿಯಾ ಕಾವೇರಿ, ವಿಜಯಲಕ್ಷ್ಮಿ ರೆಡ್ಡಿ, ಡಾ.ಅರ್ಷದ್‌ ಹುಸೇನ್‌, ಡಾ.ಪ್ರಶಾಂತ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ ಇದ್ದರು. ಸಪ್ನಾ ಅಮಿತ್‌ ದೇಶಪಾಂಡೆ ನಿರೂಪಿಸಿದರು. ಶ್ವೇತಾ ಎಂ.ಜಿ. ವಂದಿಸಿರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !