ಕಾಳಗಿ: ಅತ್ಯಂತ ಪ್ರೀತಿ, ಕಾಳಜಿಯ ಸಹೋದರನ ಅಗಲಿಕೆಯ (ಜ.26) ಭಾರವಾದ ನೋವಿನ ನಡುವೆಯೂ ಶಿಕ್ಷಕಿಯೊಬ್ಬರು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಶಾಲಾ ಮಕ್ಕಳಿಗೆ ₹35 ಸಾವಿರ ಖರ್ಚು ಮಾಡಿ ವಯೋನಿವೃತ್ತಿ ಹೊಂದಿರುವ ಘಟನೆ ಪಟ್ಟಣದಲ್ಲಿ ಶನಿವಾರ ಕಂಡುಬಂದಿದೆ.

ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಫೆ.28ಕ್ಕೆ ನಿವೃತ್ತಿ ಹೊಂದಿರುವ ಸರ್ವಮಂಗಳ ಪಾಟೀಲ ಎಂಬುವರೆ ತನ್ನ ಶಾಲೆಯ ಮುನ್ನೂರು ಮಕ್ಕಳ ಪ್ರತಿಯೊಬ್ಬರ ಕೈಗೆ ಕುಡಿಯುವ ನೀರಿನ ಸ್ಟೀಲ್ ಬಾಟಲಿಯನ್ನು ನೀಡಿ ಮಕ್ಕಳ ಪ್ರೀತಿಯಲ್ಲಿ ಶಾಶ್ವತ ಬೇರೂರಿದ್ದಾರೆ.

ಈ ದಿನ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅನೀಲಕುಮಾರ ಗುತ್ತೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಪಂಚಾಳ, ಶಿಕ್ಷಣಪ್ರೇಮಿ ಗುಂಡಪ್ಪ ಕರೆಮನೋರ, ನಿಜಲಿಂಗಪ್ಪ ಕೊರಳ್ಳಿ ಶಿಕ್ಷಕಿಯ ಸೇವಾ ಮನೋಭಾವನೆ ಸ್ಮರಿಸಿ ಹಾರೈಸಿದರು. ಅನೇಕ ಮಕ್ಕಳು ಮಮತೆಯ ಮಾತುಗಳನ್ನು ಹೇಳಿದರು.

ಮುಖ್ಯಶಿಕ್ಷಕಿ ಅರುಣಾದೇವಿ, ಎಸ್ಡಿಎಂಸಿ ಅಧ್ಯಕ್ಷೆ ಜಗನಜ್ಯೋತಿ ಪ್ಯಾರಕಿ, ಸಿಆರ್ಸಿ ಸಂಯೋಜಕಿ ಬಾಳಮ್ಮ ಹೂಗಾರ, ಸಿಬ್ಬಂದಿ ಮತ್ತಿತರರು ಶಿಕ್ಷಕಿಯ ಕಾರ್ಯ ಮೆಚ್ಚಿ ಸನ್ಮಾನಿಸಿ ಬೀಳ್ಕೊಟ್ಟರು. ಪಾರ್ವತಿ ಪ್ರಾರ್ಥಿಸಿದರು. ಅನ್ನಪೂರ್ಣ ಸ್ವಾಗತಿಸಿದರು. ಸುಧಾರಾಣಿ ಚಿದ್ರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.