ಸೇಡಂ: ತಾಲ್ಲೂಕಿನ ಮಳಖೇಡದ ಐತಿಹಾಸಿಕ ಕೋಟೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸ್ಥಳೀಯರಿಂದ ಕೋಟೆ ಹೇಗೆ ಕುಸಿಯಿತು ಎಂಬ ಮಾಹಿತಿ ಪಡೆದರು.

‘ಕೋಟೆ ಸುತ್ತಲೂ ಇರುವ ಜನರಿಗೆ ಜಾಗ್ರತೆ ವಹಿಸಬೇಕು. ಕೋಟೆ ಉರುಳಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ’ ಎಂದು ತಿಳಿಸಿದರುದರು.

ಈಚೆಗೆ ಉದ್ಘಾಟನೆಗೊಂಡ ಮಳಖೇಡ ನೂತನ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿ, ಸೇತುವೆಯಿಂದ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುತ್ತಿದೆ. ಅಪಘಾತವಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು. ಅಲ್ಲಲ್ಲಿ ಸೂಚನಾ ಫಲಕಗಳು ಸೇರಿದಂತೆ ಇನ್ನಿತರ ಮಾರ್ಗದರ್ಶನ ನೀಡುವಂತಹ ಸೂಚನೆ ಇರಬೇಕು’ ಎಂದು ಸೂಚಿಸಿದರು.

‘ರಾಷ್ಟ್ರಕೂಟರ ಕಾಲದ ಕೋಟೆಗೆ ತನ್ನದೇ ಇತಿಹಾಸವಿದೆ. ಕೋಟೆ ಪುನರುತ್ಥಾನವಾಗಬೇಕು. ಗತಕಾಲದ ಇತಿಹಾಸ ನೆನಪಿಸುವ ನಿಟ್ಟಿನಲ್ಲಿ ಕೋಟೆ ಜೀರ್ಣೋದ್ಧಾರ ಆಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ದೊಡ್ಡಪ್ಪ ಬೊಯ್ಯಾರ ಅವರು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕ ಧನಶ್ರೀ, ಉಪವಿಭಾಗಾಧಿಕಾರಿ ಕಚೇರಿ ಗ್ರೇಡ್-2 ತಹಶೀಲ್ದಾರ್ ನಾಗನಾಥ ತೆರಗೆ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ಪಾಟೀಲ, ತಾ.ಪಂ ಇಒ ಚನ್ನಪ್ಪ ರಾಯಣ್ಣನವರ, ಸಹಾಯಕ ಕೃಷಿ ನಿರ್ದೇಶಕ ವೈ.ಎಲ್. ಹಂಪಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.