ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ | ನಾಲ್ಕು ಜಿ.ಪಂ ಕ್ಷೇತ್ರ: ಅರಣಕಲ್‌, ರೇವಗ್ಗಿ, ಗೊಣಗಿ ಸೇರ್ಪಡೆ

ತೀರ್ಥಕುಮಾರ ಬೆಳಕೋಟಾ
Published 22 ನವೆಂಬರ್ 2023, 5:07 IST
Last Updated 22 ನವೆಂಬರ್ 2023, 5:07 IST
ಅಕ್ಷರ ಗಾತ್ರ

ಕಮಲಾಪುರ: ಕಮಲಾಪುರ ತಾಲ್ಲೂಕಿನಲ್ಲಿ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಸೊಂತ, ಮಹಾಗಾಂವ, ಅರಣಕಲ್‌, ವಿ.ಕೆ. ಸಲಗರ ಗ್ರಾಮಗಳನ್ನು ಜಿಲ್ಲಾ ಪಂಚಾಯಿತಿ ಕೇಂದ್ರ ಸ್ಥಾನವನ್ನಾಗಿ ನಿಗದಿ ಪಡಿಸಿ, ಕಳೆದ ಅ. 31ರಂದು ಪಂಚಾಯತ್‌ ರಾಜ್‌ ನಿರ್ದೇಶಕ ಹಾಗೂ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿ ಎನ್‌. ನೋಮೇಶ ಕುಮಾರ ಆದೇಶ ಹೊರಡಿಸಿದ್ದಾರೆ.

ಹಿಂದೆ ಕಾಳಗಿ ತಾಲ್ಲೂಕಿನಲ್ಲಿದ್ದ ಅರಣಕಲ್, ಬುಗಡಿ ತಾಂಡಾ, ಸಿಂಗ್ಯಾನಿ ತಾಂಡಾ, ಕಿಂಡಿ ತಾಂಡಾ, ರೇವಗ್ಗಿ, ಗೊಣಗಿ, ಗ್ರಾಮಗಳನ್ನು ಸರ್ಕಾರ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ ಮಾಡಿ, ಆದೇಶ ಹೊರಡಿಸಲಾಗಿದೆ. ಅದರನ್ವಯ ಕಮಲಾಪುರ 4 ಹಾಗೂ ಕಾಳಗಿ ತಾಲ್ಲೂಕಿನಲ್ಲಿ 3 ಕ್ಷೇತ್ರಗಳನ್ನಾಗಿ ನಿಗದಿ ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಕ್ಷೇಪಣೆಗೆ ನ. 6ರ ವರಗೆ ಕಾಲಾವಕಾಶ ಒದಗಿಸಲಾಗಿತ್ತು. ಈ ಸಂಬಂಧ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ ಎಂಬುದು ಮೂಲಗಳಿಂದ ತಿಳಿದಿದೆ. ಹಿಂದೆ ಮಹಾಗಾಂವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಕುರಿಕೋಟಾ ಗ್ರಾಮ, ಯಾವುದೇ ಜಿಲ್ಲಾ ಪಂಚಾಯಿತಿ ಪಟ್ಟಿಯಲ್ಲಿ ಇಲ್ಲ. ಇದು ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ.

ಸೊಂತ ಜಿ.ಪಂ: ಸೊಂತ ತಾಂಡಾ, ಗುತ್ತಿ ಡೊಂಗರಗಾಂವ, ತಾಂಡಾ, ಮರಗುತ್ತಿ, ಕಿಣಿ ಸಡಕ, ಕಿಣಿ ಸರಪೊಸ ಗ್ರಾಮ, ಕೆಳಗಿನ ತಾಂಡಾ, ಮರಮಂಚಿ, ಬಾಚನಾಳ, ಪಟವಾಡ ಗ್ರಾಮ, ಪಟವಾಡ ತಾಂಡಾ, ನೀಲಕೋಡ, ಗ್ರಾಮ, ಹರಜಿ ಕಾಳಮಂದರಗಿ, ಗೊಬ್ಬುರವಾಡಿ, ಡೋರಜಂಬಗಾ, ಮಳಸಾಪೂರ, ಹೊನ್ನಳ್ಳಿ.

ಮಹಾಗಾಂವ ಜಿ.ಪಂ: ಮಹಾಗಾಂವ, ಮಹಾಗಾಂವ ವಾಡಿ, ಮಹಾಗಾಂವ ಕ್ರಾಸ್, ಧಮ್ಮೂರ ಆರ್.ಸಿ., ಚಂದ್ರನಗರ, ಹೊಳಕುಂದಾ, ಓಕಳಿ, ವರನಿಹಾಳ, ಭಗವಾನ ತಾಂಡಾ, ದಸ್ತಾಪುರ, ರಾಜನಾಳ, ನಾವದಗಿ(ಬಿ), ನವನಿಹಾಳ, ಕಟ್ಟಳ್ಳಿ, ಬೆಳಕೋಟಾ, ಬಬಲಾದ ಐ.ಕೆ., ಕಣ್ಣೂರ, ಅಂಕಲಗಾ, ಭೂಸಣಗಿ, ಯಳವಂತಗಿ ಬಿ., ಯಂಕಚಿ ಆರ್‌.ಸಿ., ಕಗ್ಗನಮರಡಿ, ಸಿರಗಾಪುರ ಆರ್.ಸಿ., ಸಿರಡೋಣ.

ಅರಣಕಲ್ ಜಿ.ಪಂ: ಚೇಂಗಟಾ, ಜುಮ್ಮನಕೊಳ್ಳ ತಾಂಡ, ಅಡಕಿ ಮೊಕ ತಾಂಡಾ, ಕಲಮೂಡ, ನಾಮನಾಯಕ ತಾಂಡಾ, ಪಂಗರಗಾ, ಧುತ್ತರಗಾ, ನಾಗೂರು, ತಡಕಲ, ಹರಕಂಚಿ, ಅರಣಕಲ, ಬುಗಡಿತಾಂಡಾ, ರೇವಗ್ಗಿ, ಗೋಗಿ, ಜೀವಣಗಿ, ಭೀಮನಾಳ, ದಿನಸಿ(ಕೆ), ದಿನಸಿ(ಕೆ)ತಾಂಡಾ, ಅಂತಪನಾಳ, ಭುಯಾರ, ಕವನಹಳ್ಳಿ, ಗೋಣಗಿ, ಬೇಲೂರು ಕೆ.

ವಿಕೆ ಸಲಗರ ಜಿ.ಪಂ: ವಿಕೆ ಸಲಗರ, ಅಂಬಲಗಾ, ಲಾಡಮುಗಳಿ, ಮಡಕಿ, ಹೋಡಲ್, ಲೇಂಗಟಿ, ಕುದಮೂಡ, ಮುದ್ದಡಗಾ(ಬಿ), ಶ್ರೀಚಂದ, ಜವಳಗಾ, ಕೊಟ್ಟರಗಾ, ಮುರಡಿ, ಕಲಕುಟಗಾ, ಅಪಚಂದ ಗ್ರಾಮಗಳನ್ನು ಸೇರ್ಪಡೆ ಮಾಡಲಾಗಿದೆ.

ಆಕ್ಷೇಪಣೆ ಸಲ್ಲಿಕೆ ಕಾಲಾವಕಾಶ ಮುಕ್ತಾಯಗೊಂಡಿದೆ. ಸರ್ಕಾರದಿಂದ ಅಂತಿಮ ಆದೇಶ ಹೊರ ಬೀಳುವುದು ಬಾಕಿಯಿದೆ. ಕುರಿಕೋಟಾ ಮಹಾಗಾಂವ ಜಿಲ್ಲಾ ಪಂಚಾಯಿತಿಯಲ್ಲೇ ಮುಂದುವರಿಯಲಿದೆ
ಮೋಸಿನ್‌ ಅಹಮ್ಮದ್‌, ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT