ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಜಿಎಸ್‌ಟಿ ಪಾಲು ಬರದಿರಲು ಪ್ರಧಾನಿ ಮೋದಿ ಕಾರಣ: ಸಿದ್ದರಾಮಯ್ಯ

Last Updated 13 ಅಕ್ಟೋಬರ್ 2021, 9:07 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯಕ್ಕೆ ಪ್ರತಿವರ್ಷ ಬರಬೇಕಿದ್ದ ಜಿಎಸ್‌ಟಿ ತೆರಿಗೆ ಪಾಲನ್ನು ಕೊಡದಿರಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಅವರಿಗೆ ಕೇಂದ್ರ ಮತ್ತು ರಾಜ್ಯದ ಮಧ್ಯೆ ಆದ ಒಪ್ಪಂದದಂತೆ ನಮ್ಮ ಪಾಲಿನ ಹಣ‌ ಕೊಡುವ ಆಸಕ್ತಿಯೇ ಇಲ್ಲ' ಎಂದು ವಿಧಾನಸಭೆ ವಿರೋಧ ಪಕ್ಷದ ‌ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ಟಿ ನೀತಿ ಒಪ್ಪಿಕೊಂಡ ಬಳಿಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಗುವ ನಷ್ಟವನ್ನು 2022ರವರೆಗೂ ಭರ್ತಿ ಮಾಡಿಕೊಡಬೇಕು. ಆದರೆ, ರಾಜ್ಯಕ್ಕೆ ಬರಬೇಕಿರುವ ಪಾಲನ್ನು 15ನೇ ಹಣಕಾಸು ಆಯೋಗದಲ್ಲಿ ಗಣನೀಯವಾಗಿ ಇಳಿಕೆ ಮಾಡಿದ್ದಾರೆ. ಈ ಅನ್ಯಾಯಕ್ಕೆ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರೇ ಕಾರಣ' ಎಂದು ಹರಿಹಾಯ್ದರು.

ರಾಜ್ಯದ ‌ಬಿಜೆಪಿಯ 25 ಸಂಸದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಅವರನ್ನು ಅಯ್ಕೆ ಮಾಡಿ ಕಳಿಸಿ‌ ಪ್ರಯೋಜನವೇನು ಎಂದು ಪ್ರಶ್ನಿಸಿದರು.

14ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶಢ 4.71ರಷ್ಟು ಜಿಎಸ್ಟಿ ನಷ್ಟ ಪರಿಹಾರ ಕೊಡಬೇಕಿತ್ತು. 15ನೇ ಹಣಕಾಸು ಆಯೋಗದಲ್ಲಿ ಶೇ 1.67 ನಷ್ಟು ಕಡಿತ ಮಾಡಿ ಶೇ 3.64ರಷ್ಟು ಮಾತ್ರ ನಷ್ಟ ಪರಿಹಾರ ಅನುದಾನ ಕೊಡಲು ಮುಂದಾಗಿದೆ. ಇದರಿಂದ ರಾಜ್ಯಕ್ಕೆ ₹ 78 ಸಾವಿರ ‌ಕೋಟಿ‌ ಬದಲು ₹ 40 ಸಾವಿರ ‌ಕೋಟಿ ಮಾತ್ರ ಬರಲಿದೆ. ಅಲ್ಲದೇ ರಾಜ್ಯಕ್ಕೆ ಬರಬೇಕಿದ್ದ ₹ 5495 ಕೋಟಿ ವಿಶೇಷ ಪರಿಹಾರ ‌ಕೊಡಲೂ ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದಾರೆ' ಎಂದು ಹರಿಹಾಯ್ದರು.

'ನಮ್ಮ‌ ಪಾಲಿನ ಜಿಎಸ್ಟಿ ಪರಿಹಾರವನ್ನು ಹಕ್ಕಿನಿಂದ ಪಡೆಯುವ ‌ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಲ ಪಡೆಯಲು ‌ಮುಂದಾಗಿದ್ದಾರೆ. ಆ ಸಾಲವನ್ನು ಸೆಸ್ ಹಾಕುವ ಮೂಲಕ ಭರಿಸಿಕೊಳ್ಳುವುದಾಗಿ ಕೇಂದ್ರ ತಿಳಿಸಿದೆ. ಇದು ಸರಿಯಲ್ಲ. ನಮ್ಮ ಪಾಲಿನ ತೆರಿಗೆ ಪಾಲನ್ನು ಕೂಡಲೇ ಕೊಡುವಂತೆ ಬೊಮ್ಮಾಯಿ ಅವರು ಒತ್ತಡ ಹೇರಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT