ಸೋಮವಾರ, ಡಿಸೆಂಬರ್ 5, 2022
19 °C
ಉಪವಿಭಾಗಾಧಿಕಾರಿ ಎಮ್.ಕಾರ್ತಿಕ ಅಭಿಮತ

ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸಿ: ಎಮ್.ಕಾರ್ತಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೇಡಂ:ಕನ್ನಡ ಬಳಕೆಯು ನಿತ್ಯ ವ್ಯವಹಾರದಲ್ಲಿ ಅಳವಡಿಕೆಯುಕಡ್ಡಾಯ ವಾದಾಗ ಮಾತ್ರ ಕನ್ನಡ ಭಾಷಾ ಬೆಳವಣಿಗೆ ಸಾಧ್ಯ ಎಂದು ಉಪವಿ ಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗ ಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

'ಕರುನಾಡು ಅತ್ಯಂತ ವಿಶಾಲವಾ ಗಿದ್ದು, ಇಲ್ಲಿ ಜಾತ್ಯತೀತತೆಯ ಸೌಹಾರ್ದತೆಯಿದೆ. ಇಂತಹ ನಾಡಿ ನಲ್ಲಿ ಕನ್ನಡ ಮಾತನಾಡುವುದು ಪ್ರತಿಯೊ ಬ್ಬರ ಜೀವಂತಿಕೆಯ ಉಸಿರಾಗಿದೆ ಎಂದರು.‌

ತಾಲ್ಲೂಕು ಪಂಚಾಯಿತಿ ಇಒ ಶಂಕರ ರಾಠೋಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕ್ರಯ್ಯಸ್ವಾಮಿ ಇಮಡಾಪೂರ ಮಾತನಾಡಿದರು.

ಸಾಧಕರಿಗೆ ಸತ್ಕಾರ: ಸೇಡಂ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿದ್ದು ಕನ್ನಡ ನಾಡು ನುಡಿ ಏಳಿಗೆಯಲ್ಲಿ ತೊಡಗಿಸಿಕೊಂಡಿರುವ ಬಸ್ಸಮ್ಮ ನೂಲಾ, ವೈ.ಎಲ್ ಹಂಪಣ್ಣಾ, ಶರಣಪ್ಪ, ಅವಿನಾಶ ಬೋರಂಚಿ, ವಿಮಲಾಬಾಯಿ ಸೋಬಾನ್, ಮುರುಳಿಧರ ದೇಶಪಾಂಡೆ, ಬುಗ್ಗಪ್ಪ ಮಾಸ್ತರ, ರಾಮಚಂದ್ರ ಗುತ್ತೇದಾರ, ಶಾಂತಾ, ಸವಿತಾ ಹಾರಿವಾಳ, ಮಣಿಸಿಂಗ್ ಚವಾಣ್, ಶ್ರೀನಿವಾಸ ಕಾಸೋಜು, ಮಾರುತಿ ಗಡಾಳೆ, ಶಾಂತಕುಮಾರ ಚನ್ನಕ್ಕಿ, ಲಕ್ಷ್ಮೀದೇವಿ, ವೆಂಕಟಪ್ಪ, ಜಗನ್ನಾಥ ಮಡಿವಾಳ, ದೇವಿಂದ್ರ ನಾಯಕ ಅವರಿಗೆ ಸತ್ಕರಿಸಲಾಯಿತು.

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಉಪನ್ಯಾಸ ನೀಡಿದರು. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್, ಗ್ರೇಡ್ -2 ತಹಶೀಲ್ದಾರ್ ಭೀಮಣ್ಣ ಕುದರಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮಾ ಚಿಮ್ಮನಚೋಡ್ಕರ್, ಪುರಸ ಭೆ ಅಧ್ಯಕ್ಷೆ ಶೋಭಾ ಹೂಗಾರ, ಸಿಪಿಐ ಆನಂದರಾವ್ ಇದ್ದರು. ‌ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಸ್ವಾಗತಿಸಿದರು. ಎಸ್.ಎ ಮುನಾಫ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು