ಕಲಬುರಗಿ: ‘ದೇಶ ಮೊದಲು ಎಂಬ ಧ್ಯೇಯದೊಂದಿಗೆ ಜನರಲ್ಲಿ ಕುಲಭೇದ ಹೋಗಲಾಡಿಸಿ, ರಾಷ್ಟ್ರಭಕ್ತಿಯನ್ನು ಬಿತ್ತುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ವನ್ನು ನಿಷೇಧಿಸುತ್ತೇವೆ ಎಂಬ ಹೇಳಿಕೆ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ಕಾಲಹರಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ನಗರ ಅಧ್ಯಕ್ಷ ಚಂದು ಪಾಟೀಲ ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದ್ದು, ತಮ್ಮದೇ ಶಾಸಕರ ಆರೋಪ, ವಾಗ್ದಾಳಿ, ಪ್ರಶ್ನೆಗಳನ್ನು ಎದುರಿಸಲಾಗದೇ ವಿಷಯಾಂತರ ಮಾಡುತ್ತಿದ್ದಾರೆ. ಸಚಿವ ಪ್ರಿಯಾಂಕ್ ಅವರು ಆರ್ಎಸ್ಎಸ್ ಇತಿಹಾಸ ಮರೆತಂತೆ ಕಾಣುತ್ತಿದೆ. ಇಡೀ ದೇಶವನ್ನೇ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ಇಂದಿರಾ ಗಾಂಧಿ ಕೈಯಲ್ಲೇ ಆರ್ಎಸ್ಎಸ್ ನಿಷೇಧಿಸಲು ಆಗಿಲ್ಲ. ಕಾಂಗ್ರೆಸ್ ತನ್ನ ಉತ್ತುಂಗದ ಸ್ಥಿತಿಯಲ್ಲಿದ್ದಾಗಲೇ ಏನೂ ಮಾಡಿಲ್ಲ. ಇನ್ನು ದೇಶದೆಲ್ಲೆಡೆ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಮೂರಂಕಿಯೂ ದಾಟಿಲ್ಲ ಎಂಬುದು ತಲೆಯಲ್ಲಿ ಇರಲಿ’ ಎಂದು ತಿರುಗೇಟು ನೀಡಿದ್ದಾರೆ.

‘ದೇಶದ ಪ್ರಧಾನಿ, ಗೃಹ ಮಂತ್ರಿ, ರಕ್ಷಣಾ ಸಚಿವರು ಸೇರಿ ದೇಶದ ಹತ್ತಾರು ರಾಜ್ಯಗಳ ಮುಖ್ಯಮಂತ್ರಿಗಳು, ಕೋಟ್ಯಂತರ ಹಿಂದೂಗಳು ಸದಾ ಸಂಘ ಧ್ಯೇಯನಿಷ್ಠ ಸ್ವಯಂ ಸೇವಕರಾಗಿದ್ದಾರೆ. ಸಂಘವು ರಾಷ್ಟ್ರದಲ್ಲಿ ಎಲೆಮರೆ ಕಾಯಿಯಂತೆ ಬಡವರು, ಆದಿವಾಸಿಗಳು, ಸ್ಲಂನಲ್ಲಿ ಇರುವವರು, ಸಂಕಷ್ಟದಲ್ಲಿ ಇರುವವರ ಸೇವೆ ಮಾಡುತ್ತಿದೆ. ರಾಷ್ಟ್ರಕ್ಕೆ ಆಪತ್ತು ಬಂದಾಗ, ಪ್ರಕೃತಿ ವಿಕೋಪ ಎದುರಾದಾಗ ಮೊದಲಿಗೆ ಸೇವೆಗೆ ಸಜ್ಜಾಗಿ ನಿಲ್ಲುವುದು ಸಂಘ ಎಂಬ ಅರಿವು ಖರ್ಗೆ ಅವರಿಗೆ ಇರಲಿ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.