‘ನಿತ್ಯವೂ ಅಪಮಾನ ತಪ್ಪಿಲ್ಲ...’
‘ಜಾತಿ ಕಾರಣಕ್ಕೆ ಬದುಕಿನಲ್ಲಿ ಇಂದಿಗೂ ಅವಮಾನ ತಪ್ಪಿಲ್ಲ’ ಎಂದು ಮಹಾಯಾನ ಕೃತಿಯ ಲೇಖಕ ಪ್ರೊ.ಎಚ್.ಟಿ.ಪೋತೆ ವಿಷಾದಿಸಿದರು. ‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂಬ ಕುವೆಂಪು ಮಾತಿನಂತೆ ನಾನು ಬದುಕಲು ಪ್ರಯತ್ನಿಸಿದೆ. ಬುದ್ಧ ಬಸವ ಅಂಬೇಡ್ಕರ್ ಅವರನ್ನು ಪಡೆದುಕೊಂಡರೆ ಬದುಕಿನಲ್ಲಿ ಅಪಮಾನ ಕಳೆದುಕೊಳ್ಳಲು ಸಾಧ್ಯವಿದೆ. ಆದರೆ ಯುವಪೀಳಿಗೆಯಲ್ಲಿ ಯಾರೊಬ್ಬರೂ ಅಂಬೇಡ್ಕರ್ ಅವರನ್ನು ಓದದಿರುವುದು ದುರದೃಷ್ಟಕರ’ ಎಂದು ಕಳವಳ ವ್ಯಕ್ತಪಡಿಸಿದರು.