ಮಂಗಳವಾರ, ಜುಲೈ 27, 2021
26 °C

ಪರಿಶಿಷ್ಟ ಜಾತಿಯಲ್ಲೇ ಮುಂದುವರಿಸಿ: ಬೋವಿ ಸಮಾಜದಿಂದ ಪತ್ರ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ : ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಬರುವ ಭೋವಿ ಸಮಾಜ, ಬಂಜಾರ ಸಮಾಜ,ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿಯಲ್ಲಿಯೇ ಮುಂದುರೆಸುವಂತೆ ಆಗ್ರಹಿಸಿ ಲಂಬಾಣಿ, ಭೋವಿ, ಕೊರಚ, ಕೊರಮ ಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲ್ಲೂಕು ಘಟಕದ ವತಿಯಿಂದ ಬುಧವಾರ ಪತ್ರ ಚಳುವಳಿ ನಡೆಸಲಾಯಿತು.

ಈ ಎಲ್ಲಾ ಶೋಷಿತ ವರ್ಗಗಳ ಜನತೆ ಬಹುತೇಕ ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಶೋಷಿತರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಾಗಿದೆ ಎಂದು ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಗುತ್ತೇದಾರ ಆಗ್ರಹಿಸಿದ್ದಾರೆ.

ನಂತರ ಭೋವಿ ಸಮಾಜ ಸೇರಿದಂತೆ ಪರಿಶಿಷ್ಟ ಜಾತಿಯಲ್ಲಿ ಬರುವ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಪತ್ರ ಚಳುವಳಿ ನಡೆಸಿ ಅಂಚೆ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ರವಾನಿಸಿದರು.

ಈ ಸಂಧರ್ಭದಲ್ಲಿ ಭೋವಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಗುತ್ತೇದಾರ, ಭೀಮರಾಯ ಬಜಂತ್ರಿ ಹರವಾಳ, ತುಳಜಾರಾಮ ರಾಠೋಡ ಹರವಾಳ, ಶರಣು ಗುತ್ತೇದಾರ, ಲಕ್ಷ್ಮಣ ಪವಾರ ಮಾವನೂರ, ಭೀಮಾಶಂಕರ ಕುರಡೆಕರ್, ಭೀಮಾಶಂಕರ ಯಲಗೋಡ, ರವಿಚಂದ್ರ ಗುತ್ತೇದಾರ, ಸಾಯಬಣ್ಣ ಬಂಜೆಪಲ್ಲಿ, ನಿಂಗಣ್ಣ ನೆಲೋಗಿ, ಪ್ರಕಾಶ, ಹಣಮಂತ ಬಿಳವಾರ, ದಂಡಗುಲ್ಕರ್, ಡಾ.ಮಹಾದೇವಪ್ಪ, ತುಕಾರಾಮ ಜಾಧವ , ಯಮನಾಥ ಜಾಧವ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.