ಶುಕ್ರವಾರ, ಆಗಸ್ಟ್ 6, 2021
21 °C

ಕಲಬುರ್ಗಿಯಲ್ಲಿ ವಿದ್ಯುತ್‌ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ–1ರ ವ್ಯಾಪ್ತಿಯಲ್ಲಿನ ರೇಣುಕಾ ಶುಗರ್ಸ್‌ನಿಂದ ಅಫಜಲಪುರ ವಿದ್ಯುತ್ ವಿತರಣಾ ಕೇಂದ್ರದ ಮಾರ್ಗದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಂಡ ಕಾರಣ ಜೂನ್ 6ರಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಸರಬರಾಜು ಇರುವುದಿಲ್ಲ.

ಈ ಉಪವಿತರಣಾ ಕೇಂದ್ರದ ಮೇಲೆ ಬರುವ ಈ ಕೆಳಕಂಡ ಫೀಡರ್‌ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೋರಿದ್ದಾರೆ.

ಅಫಜಲಪುರ ವಿತರಣಾ ಕೇಂದ್ರ: ಮಲ್ಲಾಬಾದ, ಕಲ್ಲೂರ, ಬಳ್ಳೂರಗಿ, ಘತ್ತರಗಾ, ಕುಲಾಲಿ, ಅಫಜಲಪೂರ, ಶಿರವಾಳ, ಹಳಿಯಾಳ, ದೇವಣಗಾಂವ, ಅಳ್ಳಗಿ ಎನ್.ಜೆ.ವೈ ಹಾಗೂ ಮಂಗಳೂರ.

ಕರಜಗಿ ವಿತರಣಾ ಕೇಂದ್ರ: ಶಿವೂರ, ಉಡಚಣ, ನಂದರಗಾ, ಕರಜಗಿ ಎನ್.ಜೆ.ವಾಯ್, ಮಣ್ಣೂರ, ಗೌರ(ಬಿ), ಜೇವರ್ಗಿ ಎನ್.ಜೆ.ವಾಯ್, ಮಾಶಾಳ ಎನ್.ಜೆ.ವಾಯ್ ಹಾಗೂ ಬಿಂಗೊಳ್ಳಿ.

ನೀರು ವ್ಯತ್ಯಯ ನಾಳೆ

ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ 1118 ಎಂ.ಎಂ. ವ್ಯಾಸದ ಎಂ.ಎಸ್. ಕೊಳವೆ ಮಾರ್ಗದ ಜಾಕ್‍ವೆಲ್‍ದಲ್ಲಿ ಸೋರುವಿಕೆ ಹಾಗೂ 1000 ಎಚ್.ಪಿ. ಪಂಪಸೆಟ್ ಐ.ಪಿ.ಎಸ್. ಕೋಟನೂರದ ಸ್ಟಾರ್ಟರ್‍ದಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಪ್ರಯುಕ್ತ, ತುರ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ಬಹುಪಾಲು ಭಾಗಕ್ಕೆ ಜೂನ್ 7 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಗರದ ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.