ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ವ್ಯತ್ಯಯ ಇಂದು

Last Updated 7 ಅಕ್ಟೋಬರ್ 2020, 3:22 IST
ಅಕ್ಷರ ಗಾತ್ರ

ಕಲಬುರ್ಗಿ:ಇಲ್ಲಿಯ ಜಯನಗರ ಹಾಗೂ ರಾಜಾಪುರ ಫೀಡರ್‌ಗಳ ವ್ಯಾಪ್ತಿಯಲ್ಲಿ ಅ. 7ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂನವರು ತಿಳಿಸಿದ್ದಾರೆ.

ವಿದ್ಯುತ್‌ ವ್ಯತ್ಯಯವಾಗಲಿರುವ ಪ್ರದೇಶಗಳು:

ಜಯನಗರ ಫೀಡರ್: ಆರಿಹಂತ ನಗರ, ಜಯನಗರ, ಓಕಳಿ ಕ್ಯಾಂಪ್, ಬಸವೇಶ್ವರ ಆಸ್ಪತ್ರೆ, ಸರ್ಕಾರಿ ಸೂರ್ಯ ನಗರ, ತಿಲಕ ನಗರ, ತೇಲಕರ ಲೇಔಟ್, ಪೂಜಾ ಕಾಲೊನಿ, ಜಿ.ಡಿ.ಎ. ಲೇಔಟ್, ವಿಶ್ವೇಶ್ವರಯ್ಯ ಕಾಲೊನಿ, ಆಂಜನೇಯ ನಗರ, ಕೆ.ಜಿ.ಬಿ. ಬ್ಯಾಂಕ್, ಪ್ರಶಾಂತ ನಗರ(ಎ), ಮತ್ತು ಡೆಂಟಲ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ರಾಜಾಪುರ ಫೀಡರ್: ಪಿ.ಡಬ್ಲ್ಯೂ.ಡಿ. ಕ್ವಾಟರ್ಸ್, ರಾಜಾಪುರ, ನಾಯ್ಡು ಲೇಔಟ್, ಎಸ್.ಎಫ್.ಎಸ್. ಕ್ವಾಟರ್ಸ್, ಪ್ರಶಾಂತ ನಗರ ಎ, ಕಮೀಟಿ ಹಾಲ್, ಜಿ.ಡಿ.ಎ. ರಾಜಾಪೂರ, ಬಂಜಾರಾ ಲೇಔಟ್, ಶಹಾಬಾದ್ ಶಕ್ತಿ ನಗರ, ಮಾತಾ ಮಾಣಿಕೇಶ್ವರಿ ಕಾಲೊನಿ, ನೃಪತುಂಗ ಕಾಲೊನಿ ಹಾಗೂ ಕೇಂಬ್ರಿಡ್ಜ್‌ ಶಾಲೆ ಸುತ್ತಮುತ್ತಲಿನ ಪ್ರದೇಶಗಳು.

ಇಂದು, ನಾಳೆ ನೀರು ವ್ಯತ್ಯಯ:

ಕಲಬುರ್ಗಿ: ಸರಡಗಿಯ ಸ್ಥಾವರದಲ್ಲಿ ನೀರು ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ದುರಸ್ತಿ ಕೈಗೊಳ್ಳಬೇಕಾಗಿದೆ. ಕಾರಣ ಅ. 7 ಹಾಗೂ 8ರಂದು ನಗರದ ಕೆಲವು ಭಾಗಗಳಿಗೆ ನೀರು ಸರಬರಾಜು ಆಗುವುದಿಲ್ಲ ಎಂದುಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರ್ಗಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿಯ ಭೀಮಾ ನದಿಯ ಮೂಲ ಸ್ಥಾವರದಲ್ಲಿ 1200 ಮಿ.ಮೀ. ವ್ಯಾಸದ ಎಂ.ಎಸ್. ಏರು ಕೊಳವೆ ಮಾರ್ಗ ಮತ್ತು ಸಾಯಿ ನಗರ ಹತ್ತಿರ 315 ಮಿ.ಮೀ. ವ್ಯಾಸದ ಎಚ್.ಡಿ.ಪಿ.ಇ. ಕೊಳವೆ ಮಾರ್ಗದಲ್ಲಿ ಸೋರಿಕೆ ಕಂಡು ಬಂದಿದೆ. ಇದರ ತುರ್ತು ದುರಸ್ತಿ ಕಾರ್ಯಕೈಗೊಳ್ಳ ಬೇಕಾಗಿರುವ ಹಿನ್ನೆಲೆಯಲ್ಲಿ ನೀರು ಸರಬರಾಜಿನಲ್ಲಿ ನಿಲ್ಲಿಸಲಾಗುವುದು. ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT