ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ: ಶೇ 64.38 ಮತದಾನ

1 ನಗರಸಭೆ; 6 ಪುರಸಭೆ; ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ
Last Updated 31 ಆಗಸ್ಟ್ 2018, 14:35 IST
ಅಕ್ಷರ ಗಾತ್ರ

ಕಲಬುರ್ಗಿ: ಶಹಾಬಾದ್ ನಗರಸಭೆ, ಸೇಡಂ, ಚಿತ್ತಾಪುರ, ಆಳಂದ, ಜೇವರ್ಗಿ, ಚಿಂಚೋಳಿ ಹಾಗೂ ಅಫಜಲಪುರ ಪುರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 64.38ರಷ್ಟು ಮತದಾನವಾಗಿದೆ.

ಅಫಜಲಪುರದಲ್ಲಿ ಅತಿ ಹೆಚ್ಚು ಅಂದರೆ ಶೇ 72.03 ಹಾಗೂ ಶಹಾಬಾದ್‌ನಲ್ಲಿ ಅತಿ ಕಡಿಮೆ ಅಂದರೆ ಶೇ 53.22ರಷ್ಟು ಮತದಾನವಾಗಿದೆ. ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನದ ನಂತರ ಬಿರುಸುಗೊಂಡಿತು. ಮತಗಟ್ಟೆ ಕೇಂದ್ರಗಳತ್ತ ಬಂದ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ವೃದ್ಧರು ಹಾಗೂ ಅಶಕ್ತರನ್ನು ಕೆಲವೆಡೆ ಹೊತ್ತುಕೊಂಡು ಬಂದರೆ, ಚಿತ್ತಾಪುರದಲ್ಲಿ ತಳ್ಳುವ ಗಾಡಿಯಲ್ಲಿ ಕರೆತರಲಾಯಿತು. ಎಲ್ಲ ನಗರ ಸ್ಥಳೀಯ ಸಂಸ್ಥೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಯಾವುದೇ ಅಹಿತರ ಘಟನೆಗಳು ವರದಿಯಾಗಿಲ್ಲ.

3ರಂದು ಮತ ಎಣಿಕೆ:ಒಂದು ನಗರಸಭೆ ಹಾಗೂ ಆರು ಪುರಸಭೆಯ ಒಟ್ಟು 167 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಸೆ.3ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

ಸ್ಥಳೀಯ ಸಂಸ್ಥೆ ಹೆಸರು ಗಂಡು ಹೆಣ್ಣು ಒಟ್ಟು ಮತದಾರರು ಶೇಕಡಾವಾರು ಮತದಾನ
ಶಹಾಬಾದ್ 11,743 12,011 23,754 53.22
ಸೇಡಂ 10,948 10,557 21,505 67.51
ಚಿತ್ತಾಪುರ 8,677 8,759 17,436 67.42
ಆಳಂದ 10,881 10,224 21,105 62.52
ಜೇವರ್ಗಿ 8,017 7,960 15,977 71.1
ಚಿಂಚೋಳಿ 5,071 4,984 10,056 70.44
ಅಫಜಲಪುರ 7,054 6,527 13,581 72.03
ಒಟ್ಟು 62391 61,022 1,23,414 64.38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT