ಮಂಗಳವಾರ, ಜುಲೈ 14, 2020
25 °C

ಲಾಕ್‌ಡೌನ್‌ ಸಂಕಷ್ಟ | ಜಮೀನಿನಲ್ಲೇ ಉಳಿದಿದೆ ಹೂಕೋಸು

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ (ಕಲಬುರ್ಗಿ ಜಿಲ್ಲೆ): ಇಲ್ಲಿಯ ರೈತ ಮುಕ್ತುಮ್‌ಸಾಬ ಚೌಧರಿ ಮೂರು ಎಕರೆಯಲ್ಲಿ ಹೂಕೋಸು ಬೆಳೆದಿದ್ದು, ಲಾಕ್‌ಡೌನ್‌ನಿಂದಾಗಿ ಮಾರಾಟವಾಗದೆ ಹಾಳಾಗುವ ಆತಂಕ ಎದುರಾಗಿದೆ.

‘10 ವರ್ಷಗಳಿಂದ ಹೂಕೋಸು ಬೆಳೆಯುತ್ತಿದ್ದೇನೆ. ಪ್ರತಿ ವರ್ಷ ಏಜೆನ್ಸಿಯವರು ಮುಂಬೈ ಮಾರುಕಟ್ಟೆಗೆ ಕಳುಹಿಸುತ್ತಿದ್ದರು. 50 ಹೂಕೋಸುಗಳಿಗೆ ₹500 ದರ ಸಿಗುತ್ತಿತ್ತು. ಎಕರೆಗೆ ₹1ಲಕ್ಷ ಆದಾಯ ಬರುತ್ತಿತ್ತು. ಆದರೆ, ಈಗ ಸ್ಥಳೀಯ ಮಾರುಕೊಟ್ಟೆಯಲ್ಲಿ ರೂಪಾಯಿಗೊಂದು ಕೊಡುವಂತೆ ಕೇಳುತ್ತಿದ್ದಾರೆ. ಎಕರೆಗೆ ₹ 50 ಸಾವಿರ ಖರ್ಚಾಗಿದ್ದು, ಹಾಕಿದ ಹಣ ಬಂದರೆ ಸಾಕು ಎಂಬಂತಾಗಿದೆ’ ಎಂದು ರೈತ ಅಳಲು ತೋಡಿಕೊಂಡರು.

‘ಬ್ಯಾಂಕ್‌ನಲ್ಲಿ ಬೆಳೆ ಸಾಲ ಪಡೆದಿದ್ದೇನೆ. ಸದ್ಯ ಕಟಾವು ಮಾಡಲೇ ಬೇಕು. ಅವಧಿ ಮೀರಿದರೆ ಯಾರೂ ಖರೀದಿಸುವುದಿಲ್ಲ. ನಾನು ಬೆಳೆದಿರುವ ಹೂಕೋಸುಗಳ ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂಬುದು ಅವರ ಒತ್ತಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು