ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯ ಒಂಬತ್ತು ತಾಲ್ಲೂಕು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Published 26 ಫೆಬ್ರುವರಿ 2024, 13:29 IST
Last Updated 26 ಫೆಬ್ರುವರಿ 2024, 13:29 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಒಂಬತ್ತು ತಾಲ್ಲೂಕು ಕಚೇರಿಗಳ ಮೇಲೆ ಸೋಮವಾರ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡುತ್ತಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆ್ಯಂಟನಿ ಜಾನ್ ಜೆ.ಕೆ. ಮಾರ್ಗದರ್ಶನದಲ್ಲಿ ಒಟ್ಟು ತಲಾ 10 ಅಧಿಕಾರಿಗಳು ಇರುವ ಒಂಬತ್ತು ತಂಡಗಳು ದಾಳಿ ನಡೆಸಿವೆ. ಲೋಕಾಯುಕ್ತ ಪೊಲೀಸ್ ಇಲಾಖೆ ಡಿವೈಎಸ್‌ಪಿ, ಉಪ ಅಧೀಕ್ಷಕರು, ನಿರೀಕ್ಷಕರು, ಸಿಬ್ಬಂದಿ ದಾಳಿಯಲ್ಲಿ ಇದ್ದಾರೆ.

ಚಿಂಚೋಳಿ ತಾಲ್ಲೂಕು ಆಡಳಿತ ಸೌಧದ ಮೇಲೆ ದಾಳಿ ಮಾಡಿದ ಲೋಕಾಯುಕ್ತರು, ಅಲ್ಲಿನ ಖರ್ಚು ವೆಚ್ಚ ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಕಚೇರಿಯ ಖರ್ಚು ವೆಚ್ಚ ಹಾಗೂ ವೇತನ (ಇಎಸ್‌ಟಿ) ವಿಭಾಗದ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಅಧಿಕಾರಿಗಳ ಜತೆಗೆ ಗ್ರೇಡ್-2 ತಹಶೀಲ್ದಾರ್ ವೆಂಕಟೇಶ ದುಗ್ಗನ್ ಸಹ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT