ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯವಾದ ‘ಬಿಳಿಜೋಳದ ರೊಟ್ಟಿ’ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲೂ ಕಲಬುರಗಿ ರೊಟ್ಟಿಯನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ ಮಹಿಳೆಯರ ಪರಿಶ್ರಮವನ್ನು ಪ್ರಶಂಸಿದ್ದಾರೆ.#MannKiBaat #NarendraModi #KalaburagiRotti pic.twitter.com/s7LQNIkBS4
— Prajavani (@prajavani) June 29, 2025
ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ಕೆಲಸ ಬಿಟ್ಟಾಗ ನಮಗೆ ದಿಕ್ಕೇ ತೋಚದಂತಾಯ್ತು. ನಾನು ರೊಟ್ಟಿ ಮಾಡಿ ಮಾರಲು ಶುರುಮಾಡಿದೆ. ಇದೀಗ ಅದೇ ಆಧಾರವಾಗಿದೆ.– ಅಯ್ಯಮ್ಮ ಕುಂಬಾರ, ರೊಟ್ಟಿ ಉತ್ಪಾದಕರ ಸಂಘದ ಸದಸ್ಯೆ
ಕಲಬುರಗಿ ರೊಟ್ಟಿ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿರುವುದು ಇಡೀ ರಾಜ್ಯವೇ ಹೆಮ್ಮೆಪಡುವ ಸಂಗತಿ. ಜಿಲ್ಲೆಯಲ್ಲಿ 100ಕ್ಕೂ ಅಧಿಕ ರೊಟ್ಟಿ ಯಂತ್ರಗಳನ್ನು ನೀಡಲಾಗಿದ್ದು, ಮಹಿಳೆಯರು ಮಾಸಿಕ ಸುಮಾರು ₹ 15 ಸಾವಿರ ಆದಾಯ ಗಳಿಸುತ್ತಿದ್ದಾರೆಬಿ.– ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
ಪ್ರಧಾನಿ ಮನ್ ಕಿ ಬಾತ್‌ನಿಂದ ಕಲಬುರಗಿ ರೊಟ್ಟಿ ಇಡೀ ದೇಶಕ್ಕೆ ಪರಿಚಯವಾಗಿದೆ. ಮನ್ ಕಿ ಬಾತ್ ಬಳಿಕ ಅಮೇಜಾನ್‌ನಲ್ಲಿ 60 ಮಂದಿ ರೊಟ್ಟಿಗೆ ಆರ್ಡರ್ ಮಾಡಿದ್ದಾರೆಶರಣು– ಆರ್. ಪಾಟೀಲ, ರೊಟ್ಟಿ ಉತ್ಪಾದಕರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.