ನವದೆಹಲಿ: ‘ಮನ್ ಕೀ ಬಾತ್’ ರೇಡಿಯೊ ಕಾರ್ಯಕ್ರಮದ 123ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿ ವರ್ಷ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ವಿವಿಧ ಕ್ಷೇತ್ರಗಳಿಂದ ಲಕ್ಷಾಂತರ ಜನರು ಭಾಗವಹಿಸುವಿಕೆಯಿಂದ ಎಂದಿಗಿಂತಲೂ ಹೆಚ್ಚು ಭವ್ಯವಾಗುತ್ತಿದೆ’ ಎಂದು ಅವರು ಬಣ್ಣಿಸಿದ್ದಾರೆ.

‘ಪ್ರತಿಯೊಬ್ಬರು ಯೋಗದ ಶಕ್ತಿಯನ್ನು ಅರಿತುಕೊಳ್ಳಬೇಕು. ಈ ವರ್ಷವೂ ಜೂನ್ 21ರಂದು ಕೋಟ್ಯಂತರ ಜನರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಯೋಗ ದಿನ ಆಚರಿಸುವುದನ್ನು 10 ವರ್ಷಗಳ ಹಿಂದೆ ಆರಂಭಿಸಲಾಯಿತು. ಪ್ರತಿ ವರ್ಷವು ಯೋಗ ದಿನಾಚರಣೆಯು ಎಂದಿಗಿಂತಲೂ ಹೆಚ್ಚು ಭವ್ಯವಾಗುತ್ತಿದೆ. ಇದು ಹೆಚ್ಚಿನ ಜನರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ಈ ಬಾರಿ ಆಂಧ್ರಪ್ರದೇಶದ ವಿಶಾಖಪಟ್ಟಣದ ಆರ್.ಕೆ.ಬೀಚ್ನಲ್ಲಿ ನಡೆದ ಸಾಮೂಹಿಕ ಯೋಗ ದಿನ ಸಮಾರಂಭದಲ್ಲಿ ಅನೇಕ ಮೋಡಿ ಮಾಡುವ ಚಿತ್ರಗಳನ್ನು ನಾವು ನೋಡಿದ್ದೇವೆ. ಈ ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಒಟ್ಟಿಗೆ ಯೋಗ ಮಾಡಿದ್ದಾರೆ. ಜತೆಗೆ, 2 ಸಾವಿರಕ್ಕೂ ಹೆಚ್ಚು ಬುಡಕಟ್ಟು ವಿದ್ಯಾರ್ಥಿಗಳು 108 ನಿಮಿಷಗಳ ಕಾಲ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ದಾಖಲೆ ಸೃಷ್ಟಿಯಾಯಿತು’ ಎಂದು ಹೇಳಿದ್ದಾರೆ.

ದೇಶದಾದ್ಯಂತ ನಡೆದ ಯೋಗ ದಿನಾಚರಣೆ ಬಗ್ಗೆ ಮಾತನಾಡಿದ ಅವರು, ‘ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳು, ಬುಡಕಟ್ಟು ವಿದ್ಯಾರ್ಥಿಗಳು ಮತ್ತು ದಿವ್ಯಾಂಗರು ಸೇರಿದಂತೆ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದು ಸಂತಸ ಮೂಡಿಸಿದೆ’ ಎಂದು ಉಲ್ಲೇಖಿಸಿದ್ದಾರೆ.

‘ತೆಲಂಗಾಣದಲ್ಲಿ 3,000 ದಿವ್ಯಾಂಗರು ಯೋಗ ಪ್ರದರ್ಶನ ಮಾಡುವ ಮೂಲಕ ಯೋಗವು ಸಬಲೀಕರಣದ ಪ್ರಬಲ ಸಾಧನವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೆಹಲಿಯ ಜನರು ಯಮುನಾ ನದಿ ದಡದಲ್ಲಿ ಯೋಗಾಸನ ಮಾಡಿದ್ದಾರೆ. ಕಾಶ್ಮೀರದಲ್ಲಿರುವ ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯಲ್ಲಿ ಐಟಿಬಿಪಿ ಯೋಧರು ಹಿಮದಿಂದ ಆವೃತವಾದ ಶಿಖರಗಳ ನಡುವೆ ಯೋಗ ಪ್ರದರ್ಶಿಸಿದ್ದಾರೆ’ ಎಂದು ಮೋದಿ ವಿವರಿಸಿದ್ದಾರೆ.

ಇತ್ತ ಗುಜರಾತ್ನ ವಡ್ನಗರದಲ್ಲಿ 2,121 ಮಂದಿ ಒಟ್ಟಾಗಿ ಭುಜಂಗಾಸನ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಯೋಗ ದಿನದ ಪ್ರಯುಕ್ತ ಭಾರತೀಯ ರಾಯಭಾರ ಕಚೇರಿಗಳು ಮತ್ತು ಇತರ ಸ್ಥಳಗಳಲ್ಲೂ ಅಂತರರಾಷ್ಟ್ರೀಯ ಭಾಗವಹಿಸುವಿಕೆಯನ್ನು ನೋಡಬಹುದಾಗಿತ್ತು ಎಂದು ಹೇಳಿದ್ದಾರೆ.

‘ನ್ಯೂಯಾರ್ಕ್, ಲಂಡನ್, ಟೋಕಿಯೊ, ಪ್ಯಾರಿಸ್ ಸೇರಿದಂತೆ ವಿಶ್ವದ ಹಲವೆಡೆ ಯೋಗ ದಿನ ಆಚರಿಸಲಾಗಿದೆ. ‘ಒಂದು ಭೂಮಿ ಮತ್ತು ಒಂದು ಆರೋಗ್ಯಕ್ಕಾಗಿ ಯೋಗ’ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿತ್ತು. ಇದು ಕೇವಲ ಘೋಷಣೆಯಲ್ಲ. ಬದಲಾಗಿ ವಸುಧೈವ ಕುಟುಂಬಕಂ (ಒಂದೇ ಕುಟುಂಬ) ಎಂಬ ಭಾವನೆಯನ್ನು ಪ್ರತಿಧ್ವನಿಸುವ ನಿರ್ದೇಶನವಾಗಿತ್ತು’ ಎಂದಿದ್ದಾರೆ.

ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸುವ ನಿರ್ಣಯವನ್ನು 2014ರ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆ ಕೈಗೊಂಡಿತು. ಈ ಕುರಿತು ಭಾರತದ ಪ್ರಸ್ತಾವವನ್ನು 175 ರಾಷ್ಟ್ರಗಳ ಪ್ರತಿನಿಧಿಗಳು ಅಂದಿನ ಸಭೆಯಲ್ಲಿ ಒಕ್ಕೊರಲಿನಿಂದ ಅನುಮೋದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.