ಮಂಗಳವಾರ, ನವೆಂಬರ್ 24, 2020
27 °C

ಮರಾಠ ಅಭಿವೃದ್ಧಿ ಪ್ರಾಧಿಕಾರ: ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್‌: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಮರಾಠ ಸಮಾಜದ ಮುಖಂಡರು ಇಲ್ಲಿನ ಶಿವಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕು ಮರಾಠ ಸಮಾಜದ ಅಧ್ಯಕ್ಷ ಶಂಕರ ಭಗಾಡೆ ಮಾತನಾಡಿ, ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವುದರಿಂದ ಮರಾಠ ಸಮಾಜದಲ್ಲಿ ಹಿಂದುಳಿದವರಿಗೆ ಬಹಳ ಅನುಕೂಲವಾಗಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಧಿಸಲು ಸಹಾಯವಾಗುತ್ತದೆ ಎಂದರು.

ನಗರ ಘಟಕದ ಅಧ್ಯಕ್ಷ ದತ್ತಾ ಶಿಂಧೆ, ಗೌರವಾಧ್ಯಕ್ಷ ಜ್ಞಾನೇಶ್ವರ ನನ್ನಾವರೆ, ಬಿಜೆಪಿ ಮುಖಂಡರಾದ ಅನೀಲ ಬೋರಗಾಂವಕರ್, ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ, ಕನಕಪ್ಪ ದಂಡಗುಲಕರ್, ಭೀಮಯ್ಯ ಗುತ್ತೇತೆದಾರ, ಮರಾಠ ಸಮಾಜದ ಮುಖಂಡರಾದ ಚಂದ್ರಕಾಂತ ಸೂರ್ಯವಂಶಿ, ಪವನಕುಮಾರ ಜಾಧವ, ಅವಿನಾಶ ಸಾಳುಂಕೆ, ರಮೇಶ ಪವಾರ, ವಿಷ್ಣು ಸೂರ್ಯವಂಶಿ, ಅಶೋಕ, ಶಿವರಾಜ ಪವಾರ, ಪ್ರಭಾಕರ ಮಾನೆ, ಅಶೋಕ ಶಿಂಧೆ, ಸತೀಶ ಭಗಾಡೆ, ಬಾಬಾಸಾಹೇಬ ಸಾಳುಂಕೆ, ಶೋಮಶೇಖರ ಶಿಂಧೆ, ಶಿವಕುಮಾರ ಭಗಾಡೆ, ಡಾ.ಕಿಶನ್ ಜಾಧವ, ಲಕ್ಷ್ಮಣ ಜಾಧವ, ಸಂತೋಷ ಸಾವಂಥ, ಚಂದ್ರಕಾಂತ ಜಗತಪ, ಮುಖೇಶ ಮಾಂಗ, ರಾಮು ಶಿಂಧೆ, ದಶರಥ ಜಗತಪ, ಅಶೋಕ ಜಿಂಗಾಡೆ, ಬಸವರಾಜ ಬಿರಾದಾರ, ಭೀಮರಾವ ಸಾಳುಂಕೆ, ಉಮಾಕಾಂತ ಸೂರ್ಯವಂಶಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು