ಭಾನುವಾರ, ಜನವರಿ 26, 2020
23 °C

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ 19ರಂದು ಕಲಬುರ್ಗಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪೀಪಲ್ಸ್ ಫೋರಂ ನೇತೃತ್ವದಲ್ಲಿ 20ಕ್ಕೂ ಅಧಿಕ ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಇದೇ 19ರಂದು ಕಲಬುರ್ಗಿ ಬಂದ್ಗೆ ಕರೆ ನೀಡಿವೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಪೀಪಲ್ಸ್ ಫೋರಂ ಸಂಚಾಲಕ ಮಂಡಳಿಯ ಮಾರುತಿ ಮಾನ್ಪಡೆ ಮಾತನಾಡಿ, ಸಂವಿಧಾನ ವಿರೋಧಿ ಚಟುಚಟಿಕೆಗಳಲ್ಲಿ ತೊಡಗಿರುವ ಮೋದಿ ಸರ್ಕಾರದ ಪೌರತ್ವ ಕಾಯ್ದೆ ಖಂಡಿಸಿ ಡಿ.19 ರಂದು ಬೆಳಿಗ್ಗೆ 6.30ಕ್ಕೆ ಬಸ್ ನಿಲ್ದಾಣದ ಧರಣಿ ನಡೆಸಲಾಗುವುದು. ನಂತರ ಜಗತ್ ವೃತ್ತದಿಂದ ಮಾರ್ಕೆಟ್ ಚೌಕದವರೆಗೆ ಬೈಕ್ ರ್‍ಯಾಲಿ ನಡೆಯಲಿದೆ. ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ‌ಮುಚ್ಚುವಂತೆ ವರ್ತಕರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ದಲಿತ ಮುಖಂಡ ಡಾ.ವಿಠ್ಠಲ ದೊಡ್ಡಮನಿ, ಮೊಹಮ್ಮದ್ ಅಸಗರ ಚುಲಬುಲ್, ಬಾಬಾಖಾನ್, ಮೌಲಾ ಮುಲ್ಲಾ, ನಾಸಿರ್ ಹುಸೇನ್ ಇದ್ದರು.

ಇದಕ್ಕೂ ಮುನ್ನ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ಸಿಪಿಎಂನ ಶರಣಬಸಪ್ಪ ಮಮಶೆಟ್ಟಿ, ಸಿಪಿಐನ ಭೀಮಾಶಂಕರ ‌ಮಾಡಿಯಾಳ ಮಾತನಾಡಿ, ಎಡಪಕ್ಷಗಳಿಂದ ಡಿ 19ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ಮಾಡಲಾಗಿದೆ. ವಿವಿಧ ಸಂಘಟನೆಗಳು ಕರೆ ನೀಡಿದ ಬಂದ್ ಗೆ ಬೆಂಬಲಿಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು