ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡಗೂ ಕೊರೊನಾ ಸೋಂಕು

ಕೋವಿಡ್‌ ಅಂಟಿದ ಜಿಲ್ಲೆಯ ಮೂರನೇ ಶಾಸಕ
Last Updated 30 ಜುಲೈ 2020, 11:11 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರಿಗೂ ಕೋವಿಡ್ ಸೋಂಕು ಅಂಟಿಕೊಂಡಿದ್ದು ಬುಧವಾರ ದೃಢಪಟ್ಟಿದೆ.

ಈ ಬಗ್ಗೆ ಶಾಸಕರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದು, ‘ನನ್ನ ಕೊರೊನಾ ಟೆಸ್ಟ್‌ ಮಾಡಿಸಿದ್ದೇನೆ. ಬುಧವಾರ ಪಾಸಿಟಿವ್‌ ಬಂದಿದೆ. ಕೋವಿಡ್‌ನ ಕೆಲವು ಲಕ್ಷಣಗಳು ಕೂಡ ನನ್ನಲ್ಲಿ ಕಂಡುಬಂದಿವೆ. ಆದರೆ, ಪೂರ್ಣ ಆರೋಗ್ಯವಾಗಿದ್ದೇನೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮೆಲ್ಲರ ಆಶೀರ್ವಾದದಿಂದ ಶೀಘ್ರ ಗುಣವಾಗಿ ಮತ್ತೆ ಜನಸೇವೆಗೆ ಮರಳುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಬಸವರಾಜ ಮತ್ತಿಮೂಡ ಅವರು ಕೋವಿಡ್‌ ಸೋಂಕು ತಗುಲಿದ ಜಿಲ್ಲೆಯ ಮೂರನೇ ಶಾಸಕ. ಈ ಹಿಂದೆಯೇ ಸೇಡಂ ಶಾಸಕ ರಾಜುಕುಮಾರ ಪಾಟೀಲ ತೆಲ್ಕೂರ ಅವರ ಪತ್ನಿ– ಪುತ್ರ ಹಾಗೂ ಜೇವರ್ಗಿ ಶಾಸಕ ಡಾ.ಅಜಯಸಿಂಗ್‌ ಅವರಿಗೂ ‍ಪಾಸಿಟಿವ್‌ ಬಂದಿತ್ತು. ಈ ಇಬ್ಬರೂ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗಾಗಲೇ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT