ಸೋಮವಾರ, ಜನವರಿ 17, 2022
19 °C

ಶಾಸಕ ಪ್ರಿಯಾಂಕ್ ಖರ್ಗೆಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಶನಿವಾರ ಕೋವಿಡ್  ದೃಢಪಟ್ಟಿದೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, 'ಮೊದಲ ಹಾಗೂ ಎರಡನೆಯ ಅಲೆಯಲ್ಲಿ ನಾನು ಪಾರಾಗಿದ್ದೆ. ಒಮ್ಮೆ ಸುಳ್ಳು ಪಾಸಿಟಿವ್ ವರದಿ ಕೂಡ ಬಂದಿತ್ತು. ಇದರಿಂದ ಪದೇಪದೇ ತಪಾಸಣೆ ಮಾಡಿಸಿದಾಗಲೂ ನೆಗೆಟಿವ್ ವರದಿ ಬಂದಿತ್ತು. ಆದರೆ ಈಗ ಪಾಸಿಟಿವ್ ವರದಿ ಬಂದಿದೆ. ನನ್ನ ಸಿಬ್ಬಂದಿಗೂ ಪರೀಕ್ಷೆ ಮಾಡಿದ್ದು, ಅವರಿಗೆ ಸೋಂಕು ತಗಲಿಲ್ಲ' ಎಂದು ಬರೆದುಕೊಂಡಿದ್ದಾರೆ.

'ನನ್ನ ಜತೆ ಸಂಪರ್ಕ ಹೊಂದಿರುವ ಎಲ್ಲರೂ ಕೂಡ ಕೊರೊನಾ ತಪಾಸಣೆಗೆ ಒಳಗಾಗುವಂತೆ' ಅವರು ವಿನಂತಿಸಿದ್ದಾರೆ.

ಸದ್ಯ ಶಾಸಕರು ಬೆಂಗಳೂರಿನ ತಮ್ಮ ಮನೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು