ಶನಿವಾರ, ನವೆಂಬರ್ 28, 2020
20 °C

ಅಫಜಲಪುರ:‘ನನ್ನ ಊರು ನನ್ನ ಬೇರು’ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತವಾಗಿ ಕರ್ನಾಟಕ ರಾಜ್ಯದ ಇತಿಹಾಸ ಅರಿತುಕೊಳ್ಳುವ ‘ನನ್ನ ಊರು ನನ್ನ ಬೇರು’ ಅಭಿಯಾನವನ್ನು ಪ್ರೊಬೇಷನರಿ ಅಧಿಕಾರಿ ಡಾ.ಆಕಾಶ ಎಸ್. ಭಾನುವಾರ ಆರಂಭಿಸಿದರು.

‘ನನ್ನ ಊರು – ನನ್ನ ಬೇರು’ ಇದು ಒಂದು ರಾಜ್ಯದ ಬಗ್ಗೆ ಇತಿಹಾಸ ಹೇಳಿಕೊಡಲು ನಾನು ಮಾಡುತ್ತಿರುವ ಸಣ್ಣ ಪ್ರಯತ್ನವಾಗಿದೆ. ಇದರಿಂದ ಜನರಲ್ಲಿ ಮತ್ತು ಮಕ್ಕಳಲ್ಲಿ ರಾಜ್ಯದ ಬಗ್ಗೆ ಆತ್ಮ ಗೌರವ, ಆತ್ಮಸ್ಥೈರ್ಯ ಬೆಳೆಯುತ್ತದೆ. ಇಂತಹ ಅಭಿಯಾನವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಮಾಡಬೇಕು. ನಾನು ಐಎಎಸ್‌ ಅಧಿಕಾರಿಯಾಗಿದ್ದು, ನನಗೆ 4 ವಾರ ಅಫಜಲಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ ಸೂಚಿಸಿದೆ. ಒಂದು ವಾರ ಮುಗಿದಿದೆ. ಇನ್ನೂ 3 ವಾರ ಕಾರ್ಯನಿರ್ವಹಿಸುತ್ತೇನೆ ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ರಾಜ್ಯದ ಚರಿತ್ರೆ ಮತ್ತು ಕೊಡುಗೆಗಳನ್ನು ಪಸರಿಸುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅಭಿಯಾನವನ್ನು ಮಕ್ಕಳಿಂದ ಉದ್ಘಾಟಿಸಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ರಮೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಬಾಬು, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಎನ್‌.ಜಿ.ಹಿರೇಮಠ, ಮಲ್ಲು ಪಾಟೀಲ, ಪುರಸಭೆ ಸದಸ್ಯರಾದ ಯಮನಪ್ಪ ಭಾಸಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.