ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಭದ್ರತೆ: ರಸ್ತೆಗಿಳಿದ 270 ಬಸ್‌

ನಾಲ್ಕನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ
Last Updated 11 ಏಪ್ರಿಲ್ 2021, 4:22 IST
ಅಕ್ಷರ ಗಾತ್ರ

ಕಲಬುರ್ಗಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ನಾಲ್ಕನೇ ದಿನವೂ ಮುಂದುವರಿಯಿತು. ಇದರ ಮಧ್ಯೆ ಅಧಿಕಾರಿಗಳು ಹಲವು ಸಿಬ್ಬಂದಿಯ ಮನವೊಲಿಸಿದ್ದು, ಸುಮಾರು 270 ಬಸ್‌ಗಳು ಸಂಚರಿಸಿದವು.

ಕಳೆದ ಮೂರು ದಿನಗಳಿಂದ ಮುಷ್ಕರದಿಂದ ಬೇಸತ್ತಿದ್ದ ಪ್ರಯಾಣಿ ಕರು ಶನಿವಾರ ಬಸ್‌ ನಿಲ್ದಾಣಕ್ಕೆ ಬರಲಿಲ್ಲ. ಇದರಿಂದ ಇಡೀ ನಿಲ್ದಾಣದ ಒಳಗೆ ಕಡಿಮೆ ಸಂಖ್ಯೆಯ ಪ್ರಯಾಣಿಕರು ಮಾತ್ರ ಕಂಡುಬಂದರು. ಬಸ್‌ ನಿಲ್ದಾಣ ದಿಂದಲೇ ಹಲವು ಖಾಸಗಿ ಬಸ್‌ ಹಾಗೂ ಟೆಂಪೊಗಳ ಸಂಚಾರ ಮುಂದುವರಿದಿತ್ತು.

‘ಜನರಿಗೆ ತೊಂದರೆಯಾಗದಂತೆ ವಾಹನ ಓಡಿಸಲು 122 ಚಾಲನಾ ಮತ್ತು‌ 27 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 149 ಸಿಬ್ಬಂದಿಯ ಎರವಲು ಸೇವೆ ರದ್ದುಗೊಳಿಸಿ, ಮೂಲ ಹುದ್ದೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಎನ್‌ಇಕೆ ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ.

ಮುಷ್ಕರದ‌ ನಡುವೆಯೂ 358 ಖಾಸಗಿ ಬಸ್, 191 ಆಂಧ್ರಪ್ರದೇಶ ಮತ್ತು ತೆಲಂಗಾಣ ಸಾರಿಗೆ ಸಂಸ್ಥೆಯ ವಾಹನಗಳು ಹಾಗೂ 2757 ಇತರೆ ವಾಹನಗಳನ್ನು ಬಸ್ ನಿಲ್ದಾಣದ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.‌

₹ 4.5 ಕೋಟಿ ಆದಾಯ ಕೊರತೆ: ಸಾರಿಗೆ‌ ನೌಕರರ ಮುಷ್ಕರದಿಂದ‌ ಸಂಸ್ಥೆಗೆ ಪ್ರತಿದಿನ ₹ 4.5 ಕೋಟಿ ಆದಾಯದಲ್ಲಿ ಕೊರತೆಯಾಗಿದೆ. ಹೀಗಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಲ್ಲಿ ಎಂ.ಕೂರ್ಮರಾವ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT