ಮಂಗಳವಾರ, ಜನವರಿ 26, 2021
16 °C
ಎಐಟಿಯುಸಿ 7ನೇ ಜಿಲ್ಲಾ ಸಮ್ಮೇಳನದಲ್ಲಿ ನೂತನ ಸಮಿತಿ ರಚನೆ

ಪತಕಿ ಅಧ್ಯಕ್ಷ, ಯಳಸಂಗಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇತ್ತೀಚೆಗೆ ನಡೆದ ಆಲ್‌ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಕಾರ್ಮಿಕ ಸಂಘಟನೆಯ ಜಿಲ್ಲಾ ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರನ್ನಾಗಿ ಎಚ್‌.ಎಸ್‌.ಪತಕಿ, ಉಪಾಧ್ಯಕ್ಷರನ್ನಾಗಿ ಬಕ್ಕಪ್ಪ ಅಮಲೆ, ಶರಣಬಸಯ್ಯ, ಸ್ಯಾಮ್ಸನ್ ಐ. ರೆಡ್ಡಿ, ಮಾನಪ್ಪ ಕಟ್ಟಿಮನಿ ಇಜೇರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನೂತನ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಯಳಸಂಗಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯದರ್ಶಿಗಳನ್ನಾಗಿ ಚಂದ್ರಮೋಹನ್, ಶಿವಲಿಂಗಮ್ಮ ಲೆಂಗಟಿಕರ್, ಹಣಮಂತರಾಯ ಅಟ್ಟೂರ, ಕಲ್ಯಾಣಿ ತುಕ್ಕಾಣಿ, ಖಜಾಂಚಿಯನ್ನಾಗಿ ಸಿದ್ದಪ್ಪ ಪಾಲ್ಕಿ ಹಾಗೂ 17 ಜನ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ 28 ಜನರನ್ನು ಒಳಗೊಂಡ ಜಿಲ್ಲಾ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

 ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದು ಮೊದಲಿನಂತೆ ಕಾರ್ಮಿಕ ಹಿತರಕ್ಷಣೆ ಮಾಡುವ ಕಾಯ್ದೆಗಳನ್ನು ಮುಂದುವರೆಸಬೇಕೆಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.

ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ರೈತರ ಹೋರಾಟವನ್ನು ಎಐಟಿಯುಸಿ ಬೆಂಬಲಿಸಲಿದೆ. ಸಾರಿಗೆ ನೌಕರರ ವೇತನವನ್ನು ಸಕಾಲದಲ್ಲಿ ಪಾವತಿಸಬೇಕು ಹಾಗೂ ವೇತನ ಪರಿಷ್ಕರಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಕಟ್ಟಡ ಕಾರ್ಮಿಕರಿಗೆ ಇಎಸ್ಐ ಜಾರಿಗೊಳಿಸಬೇಕು. ಸಾಮಾಜಿಕ ಭದ್ರತೆ ಒದಗಿಸುವಂತೆ ಹೋರಾಟ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು. ಟೇಲರ್ ಮತ್ತು ಸಹಾಯಕರ ಸಮಸ್ಯೆ ಬಗೆಹರಿಸಲು ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಟೇಲರ್ ಕಲ್ಯಾಣ ಮಂಡಳಿ ರಚನೆ ಮಾಡುವಂತೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಚ್ಚಿರುವ ಸಿಮೆಂಟ್ ಕೈಗಾರಿಕೆಗಳನ್ನು ಪುನಃಚೇತನಗೊಳಿಸಲು ಒತ್ತಾಯ. ಕಲಬುರ್ಗಿ ನಗರದಲ್ಲಿ ಪ್ರಮುಖ ಜನಸಂದಣಿ ಇರುವ ಸ್ಥಳಗಳಲ್ಲಿ ಆಟೊಗಳಿಗಾಗಿ ಆಟೊ ನಿಲ್ದಾಣ ನಿರ್ಮಿಸಬೇಕೆಂದು ಮತ್ತು ಆಟೊ ಚಾಲಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಬ್ಯಾಂಕ್ ನೌಕರರು ದೇಶದ ಆರ್ಥಿಕ ಭದ್ರತೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಉಳಿವಿಗಾಗಿ ನಡೆಸುತ್ತಿರುವ ಹೋರಾಟಗಳಿಗೆ ಎಐಟಿಯುಸಿಯಿಂದ ಬೆಂಬಲಿಸಲು ನಿರ್ಣಯಿಸಲಾಯಿತು ಎಂದರು.

ನೂತನ ಅಧ್ಯಕ್ಷ ಎಚ್‌.ಎಸ್‌.ಪತಕಿ, ಕಾರ್ಯದರ್ಶಿ ಹಣಮಂತರಾಯ ಅಟ್ಟೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು