ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ–ಬೆಂಗಳೂರು ವಾರದ ವಿಶೇಷ ರೈಲು

Published 4 ಮಾರ್ಚ್ 2024, 16:05 IST
Last Updated 4 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ಕಲಬುರಗಿ: ಪ್ರಯಾಣಿಕರ ದಟ್ಟಣೆ ತಗ್ಗಿಸಲು ಕಲಬುರಗಿ ಮತ್ತು ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸಮೀಪದ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ನಡುವೆ ಹೊಸ ‘ಎಸ್‌ಎಂವಿಬಿ–ಕೆಎಲ್‌ಬಿಜಿ ವಾರದ ವಿಶೇಷ ರೈಲು’ ಮಾರ್ಚ್ 9ರಿಂದ ಸಂಚರಿಸಲಿದೆ ಎಂದು ಸಂಸದ ಡಾ.ಉಮೇಶ ಜಾಧವ ತಿಳಿಸಿದ್ದಾರೆ.

ಉಭಯ ನಿಲ್ದಾಣಗಳ ನಡುವೆ ಏಪ್ರಿಲ್ 5ರವರೆಗೆ ವಾರದಲ್ಲಿ ಒಂದು ದಿನ ಮಾತ್ರ ಎಸ್‌ಎಂವಿಬಿ–ಕೆಎಲ್‌ಬಿಜಿ ರೈಲು ಸಂಚರಿಸಲಿದೆ. ಆ ನಂತರ ವಾರದಲ್ಲಿ ಮೂರು ದಿನ ಓಡಲಿದೆ. ಪ್ರತಿ ಶುಕ್ರವಾರ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ರಾತ್ರಿ 11ಕ್ಕೆ ಹೊರಟ ರೈಲು, ಮರುದಿನ (ಶನಿವಾರ) ಬೆಳಿಗ್ಗೆ 9.5ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಶನಿವಾರ ಸಂಜೆ 5ಕ್ಕೆ ಹೊರಡುವ ರೈಲು, ಮರುದಿನ (ಭಾನುವಾರ) ಬೆಳಿಗ್ಗೆ 4.15ಕ್ಕೆ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ತಲುಪಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT