ಶನಿವಾರ, ಡಿಸೆಂಬರ್ 5, 2020
25 °C

‘ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಿದರೆ ಮಾನವ ಶಕ್ತಿ ಅಭಿವೃದ್ಧಿಯಾಗುತ್ತದೆ ಎಂದು ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.

ಚಿಂತಕ ಕೆ.ಎನ್. ಗೋವಿಂದಾಚಾರ್ಯ ಪ್ರೇರಿತ ಕಲ್ಯಾಣ ಕರ್ನಾಟಕ ಪ್ರಕೃತಿ ಕೇಂದ್ರಿತ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷಿ, ಕುರಿ ಸಾಕಾಣಿಕೆ, ತೋಟಗಾರಿಕೆ ಮುಂತಾದ ಚಟುವಟಿಕೆಗಳ ಮುಖಾಂತರ ರೈತರು ಅಭಿವೃದ್ಧಿಯಾಗಬೇಕೇಂಬ ಉದ್ದೇಶದಿಂದ ಈ ಟ್ರಸ್ಟ್ ಕೆಲಸ ಮಾಡುತ್ತದೆ. ಬರುವ ದಿನಗಳಲ್ಲಿ ಟ್ರಸ್ಟ್ ಮುಖಾಂತರ ಸಹಸ್ರಾರು ರೈತರು ಮಾರ್ಗದರ್ಶನ ಪಡೆದು ತಮ್ಮ ತಮ್ಮ ಬದುಕಿನೊಂದಿಗೆ ಅಭಿವೃದ್ಧಿ ಸಾಧಿಸುವಂತಾಗಬೇಕೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ಬಿ. ಅಂಬಲಗಿ, ಕೃಷಿ, ಗೋ ಸಾಕಾಣಿಕೆ, ಕುರಿ ಸಾಕಾಣಿಕೆ, ಅರಣ್ಯ ಕೃಷಿ ಮುಂತಾದ ಕ್ಷೇತ್ರಗಳ ಮುಖಾಂತರ ರೈತರ ಪ್ರಗತಿಗಾಗಿ ಟ್ರಸ್ಟ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ವೀರೇಂದ್ರ ಪಾಟೀಲ ಕುಮಸಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಸ್ವಾಗತಿಸಿದರು.  ಟ್ರಸ್ಟ್ ಸಹ ಕಾರ್ಯದರ್ಶಿ ಶ್ರೀನಿವಾಸ ಕುಲಕರ್ಣಿ ಇಟಗಿ ವಂದಿಸಿದರು. ಖಜಾಂಚಿ ಅನಿಕೇತನ ಮಠ ನಿರೂಪಿಸಿದರು. ನಿವೃತ್ತ

ಚನ್ನವೀರಪ್ಪ ಗುಡ್ಡಾ, ಮಹೇಶ ಸಣ್ಣಮನಿ, ಡಾ. ರಾಜೇಂದ್ರ ಯರನಾಳೆ, ಮೃತ್ಯುಂಜಯಪ್ರಸಾದ ಪತಂಗಿ, ಪ್ರಮೋದ ನಾಗೂರ, ಕೃಷ್ಣಭಟ್ಟ ಜೋಶಿ, ಬಸವರಾಜ ರಾಜಾಪೂರ, ಸೂರ್ಯಕಾಂತ ಜೀವಣಗಿ, ಎಚ್.ಸಿ. ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು