ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ: ಅವಿನಾಶ ಜಾಧವ

Last Updated 12 ಜನವರಿ 2022, 4:58 IST
ಅಕ್ಷರ ಗಾತ್ರ

ಚಿಂಚೋಳಿ: ‘ನನಗೆ ರಾಜಕೀಯ ಗೊತ್ತಿಲ್ಲ. ಶಾಸಕನಾದ ಮೇಲೆಯೇ ನಾನು ರಾಜಕಾರಣಿಯಾಗಿದ್ದೇನೆ. ಆದರೆ ನನಗೆ ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ ಹೊರತು ರಾಜಕೀಯವಲ್ಲ’ ಎಂದು ಶಾಸಕ ಡಾ. ಅವಿನಾಶ ಜಾಧವ ಹೇಳಿದರು.

ತಾಲ್ಲೂಕಿನ ಯಂಪಳ್ಳಿ ಗ್ರಾಮದಲ್ಲಿ 2018-19ನೇ ಸಾಲಿನ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ ಮೂಲಸೌಕರ್ಯ ಕಲ್ಪಿಸಲು ಮಂಜೂರಾದ ₹1 ಕೋಟಿ ಮೊತ್ತದ ರಸ್ತೆ, ಚರಂಡಿ, ಸೋಲಾರ ವಿದ್ಯುತ್ ದೀಪ, ಸಮುದಾಯ ಭವನ ಮೊದಲಾದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗೆ ನನ್ನ ತಂದೆ ಉಮೇಶ ಜಾಧವ ಬಹುದೊಡ್ಡ ಕನಸು ಕಂಡಿದ್ದಾರೆ, ಅದರಂತೆ ನಾನು ಕೂಡ ನಿಮ್ಮೆಲ್ಲರ ಕನಸು ನನಸಾಗಿಸಲು ಪ್ರಯತ್ನಿಸುತ್ತಿದ್ದೇನೆ. ಚಿಂಚೋಳಿಯಲ್ಲಿ ಹಲವು ದಶಕಗಳಿಂದ ನನೆಗುದಿಗೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಕೆಲಸ ನಡೆಯುತ್ತಿದೆ. ನಾವು ಸುಳ್ಳು ಹೇಳಿ ಹೋಗುವವರಲ್ಲ ಎಂದರು.

ಮುಖಂಡರಾದ ಚಂದ್ರಶೇಖರ ಗುತ್ತೇದಾರ, ಲಕ್ಷ್ಮಣ ಅವುಂಟಿ, ಬಸವರಾಜ ದೇಶಮುಖ್ ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷೆ ಮಾಯಾದೇವಿ ಮಹೇಶ ಗುತ್ತೇದಾರ ಅಧ್ಯಕ್ಷತೆವಹಿಸಿದ್ದರು. ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಜಗನ್ನಾಥ ಇಟಗಿ, ಆರ್. ಗಣಪತರಾವ್, ಭೀಮಶೆಟ್ಟಿ ಮುರುಡಾ, ಜಗದೀಶಸಿಂಗ್ ಠಾಕೂರ, ಅಲ್ಲಮಪ್ರಭು ಹುಲಿ ಪ್ರೇಮಸಿಂಗ್ ಜಾಧವ, ಅಶೋಕ ಚವ್ಹಾಣ, ರಾಜು ಪವಾರ, ಕಾಶಿನಾಥ ಪಾಟೀಲ, ಮಲ್ಲಿಕಾರ್ಜುನ ಮಡಿವಾಳ, ಮಾರುತಿ ಬ್ಯಾಡರ್, ಶ್ರೀಮಂತ ಕಟ್ಟಿಮನಿ, ಆಕಾಶ ಕೊಳ್ಳೂರು, ಮೋಹನ ಗುತ್ತೇದಾರ, ಪವನಕುಮಾರ ಹೂಡದಳ್ಳಿ, ಗಂಗಾಧರ ಕುಲಕರ್ಣಿ, ಸಂಗನಬಸಯ್ಯ ಮಠ, ಹಣಮಂತ ಭೋವಿ, ಜನಾರ್ದನ ಯಂಪಳ್ಳಿ, ವಸಂತಕುಮಾರ, ಖಾಜಾಸಾಬ್, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT