ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆರೆಗಳು ಹಾಗೂ ಕೃಷಿ ಹೊಂಡಗಳು ನಿರ್ಮಿಸಲಾಗಿದೆ. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಎಲ್ಲ ಕೆರೆ, ಕೃಷಿ ಹೊಂಡ ಭರ್ತಿಯಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ನೀರಿಲ್ಲದ ಬಾವಿ ಮತ್ತು ಕೊಳವೆಬಾವಿಗಳಿಗೆ ನೀರು ಬಂದಿದ್ದರಿಂದ ಕೃಷಿ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಿ ಗ್ರಾಮಸ್ಥರು ಸಂತಸ ಪಡುವಂತಾಗಿದೆ.

ಮಾಶಾಳದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಆದರೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿತ್ತು. ಅದಕ್ಕಾಗಿ ಗ್ರಾಮ ಪಂಚಾಯಿತಿಯವರು ತಮ್ಮ ಕ್ರಿಯಾಯೋಜನೆಯಲ್ಲಿ ಪ್ರತಿವರ್ಷ ಕೆರೆಗಳನ್ನು ನಿರ್ಮಾಣ ಮಾಡಿದ್ದರಿಂದ ಗ್ರಾಮಗಳ ಸುತ್ತಮುತ್ತ 4 ಕೆರೆಗಳು ನಿರ್ಮಾಣಗೊಂಡಿವೆ.

ಈ ಕುರಿತು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಮಾಜಿ ನಿರ್ದೇಶಕ ಹಾಗೂ ಗ್ರಾಮ ಸದಸ್ಯ ಶಿವು ಪ್ಯಾಟಿ ಮಾತನಾಡಿ, ‘ಹಿಂದಿನ ಗ್ರಾ.ಪಂ. ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಆಸಕ್ತಿ ವಹಿಸಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮದ ಸುತ್ತಮುತ್ತಲು ಕೆರೆಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಮದಲ್ಲಿ ವಿವಿಧ ಯೋಜನೆಯಲ್ಲಿ ಕೊರೆದಿರುವ ನೂರಕ್ಕೂ ಹೆಚ್ಚು ಕೊಳವೆಬಾವಿಗಳಿಗೆ ಮತ್ತು ಪುರಾತನ ಕಾಲದ ಬಾವಿಗಳಿಗೆ ನೀರು ಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆರೆಗಳ ನಿರ್ಮಾಣ ಮಾಡಿ ಉತ್ತಮವಾಗಿ ನಿರ್ವಹಣೆ ಮಾಡಲಾಗುವುದು’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ನರೇಗಾ ಯೋಜನೆ ಅನುಷ್ಠಾನದಿಂದ ಬೃಹತ್ ಪ್ರಮಾಣದ ಕೆರೆಗಳ ನಿರ್ಮಾಣಸಾಧ್ಯವಾಗಿದೆ. ಕೆರೆಗಳ ಹೂಳೆತ್ತಲು ಮತ್ತು ಅವುಗಳಿಗೆ ತಂತಿ ಬೇಲಿ ಹಾಕಲು ವಿಶೇಷ ಅನುದಾನವನ್ನು ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರ ಮಂಜೂರು ಮಾಡಬೇಕು’ ಎನ್ನುತ್ತಾರೆ ಗ್ರಾಮದ ಮುಖಂಡರಾದ ಬಾಳ ಸಾಬ್ ಪಾಟೀಲ,ಶಿವು ಪಾರಗೊಂಡ, ಹನುಮಂತ ಬೊಬ್ಬಣಸೂರ.

ನರೇಗಾ ಯೋಜನೆ ಅಡಿ ಪ್ರತಿ ಗ್ರಾ.ಪಂ ಕೆರೆಗಳ ನಿರ್ಮಾಣಕ್ಕೆ ಅನುದಾನ ನಿಗದಿಪಡಿಸಿದರೆ, ಪ್ರತಿ ಗ್ರಾಮದಲ್ಲಿ ಕುಡಿವ ನೀರಿಗೆ ಮತ್ತು ಕೃಷಿಗೆ ಅನುಕೂಲವಾಗುತ್ತದೆ
ವೀರಣ್ಣ ಕೌಲಗಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ

ಗ್ರಾಮದಲ್ಲಿ ನಿರ್ಮಿಸಿರುವ ಕೆರೆಗಳನ್ನು ಜನರು ಒತ್ತುವರಿ ಮಾಡಬಾರದು. ಕೆರೆಗಳ ರಕ್ಷಣೆ ಮಾಡಬೇಕು ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ
ಸುರೇಶ್ ರಾಕ ಪ್ರಗತಿಪರ ರೈತಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.