ಸೇಡಂ (ಕಲಬುರ್ಗಿ ಜಿಲ್ಲೆ): ಪಟ್ಟಣದ ಚಿಂಚೋಳಿ ರಸ್ತೆಯಲ್ಲಿ ಶನಿವಾರ ಖೋಟಾ ನೋಟು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ಆರೋಪಿಯಿಂದ ₹ 4.22 ಲಕ್ಷದಷ್ಟು ಖೋಟಾ ನೋಡಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ಆಶ್ರಯ ಕಾಲೊನಿ ನಿವಾಸಿ ಅಲ್ಲಾವುದ್ದಿನ್ ಬಂಧಿತ ಆರೋಪಿ. ಖೋಟಾ ನೋಟುಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಚಿಂಚೋಳಿ ಕಡೆ ಸಾಗಿಸಲು ಯತ್ನಿಸುತ್ತಿದ್ದ. ಇದರ ಖಚಿತ ಮಾಹಿತಿ ತಿಳಿದ ಕಲಬುರ್ಗಿ ಡಿಸಿಬಿಐ ಪಿಎಸ್‌ಐ ಪರಶುರಾಮ್ ಅವರ ತಂಡ ದಾಳಿ ನಡೆಸಿ ಬಂಧಿಸಿತು. ₹ 500, ₹ 200 ಹಾಗೂ ₹ 100 ಮುಖಬೆಲೆಯ ನಕಲಿ ನೋಟುಗಳು, ಬೈಕ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಪತ್ತೆ ಮಾಡಲು ಆರೋಪಿಯ ಮೊಬೈಲ್ ಸಂಪರ್ಕ ಜಾಲಾಡಿ, ಸಂಗಡಿಗರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದೇ ಆರೋಪಿ ಕೆಲ ವರ್ಷಗಳ ಹಿಂದೆ ಕೂಡ ಖೋಡಾ ನೋಟು ಸಾಗಣೆ ಪ್ರಕರಣದಲ್ಲಿಯೇ ಬಂಧಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೇಡಂ ಪಿಎಸ್‌ಐ ನಾನಾಗಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.