ಗುರುವಾರ , ಮೇ 19, 2022
23 °C
ಕೊಳ್ಳೂರು: ಪಾರ್ವತಿ ಪರಮೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ

ಕಲಬುರಗಿ | ‘ಮಾನವ ಜನ್ಮ ಶ್ರೇಷ್ಠವಾದುದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಮಾನವನ ಜನ್ಮಶ್ರೇಷ್ಠವಾಗಿದೆ. ಮಾನವ ತನ್ನ ಜೀವಿತಾವಧಿಯಲ್ಲಿ ಪರೋಪಕಾರದ ಪುಣ್ಯಕಾರ್ಯಗಳನ್ನು ಮಾಡಿ ದೇವರ ಅನುಗ್ರಹಕ್ಕೆ ಪಾತ್ರರಾಗಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ತಿಳಿಸಿದರು.

ತಾಲ್ಲೂಕಿನ ಕೊಳ್ಳೂರು ಗ್ರಾಮದ ಪಾರ್ವತಿ ಪರಮೇಶ್ವರ ಜಾತ್ರೆ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ತುಮಕುಂಟಾದ ಕೊಳದಗ್ನಿ ವೀರಪ್ರಭು ಶಿವಾಚಾರ್ಯರು ಮಾತನಾಡಿ, ಜಾತ್ರೆ ಎಂಬುದು ಕೇವಲ ಬೆಂಡು ಬತ್ತಾಸು ತಿಂದು, ಜಯಕಾರ ಹಾಕಿ ತೆಂಗಿನಕಾಯಿ ಒಡೆದು ಹೋಗುವದಲ್ಲ. ಜಾತ್ರೆ ಎಂದರೆ ಅದು ನಮ್ಮನ್ನು ಜಾಗೃತಗೊಳಿಸುವ ಒಂದು ಉತ್ಸವ. ಇದಕ್ಕಾಗಿ ಸತ್ಸಂಗಗಳು ಅತ್ಯಾವಶ್ಯಕವಾಗಿವೆ. ಶರಣರ, ಸಂತರ ಸಂಗದಿಂದ ಅನುಭಾವಮೃತದ ಮೂಲಕ ಭಕ್ತಿ ಸಂಸ್ಕಾರ ಪಡೆದು ಜೀವನ ಮುಕ್ತಿಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖಂಡ ಸಂಜೀವನ ಯಾಕಾಪುರ ಮಾತನಾಡಿದರು. ಗೌತಮ ಪಾಟೀಲ, ಸಯ್ಯದ್ ನಿಯಾಜ್ ಅಲಿ, ರಾಹುಲ್ ಯಾಕಾಪುರ, ಎಂ.ಪಿ ರಾಮರಾವ್ ಇದ್ದರು. ಗೋಪಾಲರೆಡ್ಡಿ ಗೋವಿಂದನೋರ್ ಸ್ವಾಗತಿಸಿದರು.

ಶಿವಕುಮಾರ ಪವಾಡಶೆಟ್ಟಿ, ರಾಜಶೇಖರ ಪವಾಡಶೆಟ್ಟಿ, ರಾಜಶೇಖರ ಹೊಕ್ರಾಣಿ, ಬಕ್ಕಪ್ಪ ಬೇಮಳಗಿ, ಉಮೇಶ ಬೇಸ್ಕಾರ್, ವಸಂತ ವಾಲಿಕಾರ, ಭೀಮರೆಡ್ಡಿ ಯಂಗಂ, ಈರಪ್ಪ ಚಿಂಚೋಳಿ, ಸುಧಾಕರ ಗುತ್ತಿ, ಕೃಷ್ಣ ದಳಪತಿ, ಪವನ ಬೇಮಳಗಿ, ಬಸವರಾಜ ಹೊಕ್ರಾಣಿ, ಶಿವಪುತ್ರಪ್ಪ ಹುಗ್ಗೆಳ್ಳಿ, ಪ್ರಭಾಕರ ಬುಡ್ಡನೋರ್, ಜಗನ್ನಾಥ ತಳವಾರ, ಮಾಣಿಕರಾವ್ ಮಾಸ್ಟರ್ ಮೊದಲಾದವರು ಇದ್ದರು.

ಇದಕ್ಕೂ ಮೊದಲು ನಸುಕಿನ 5ರಿಂದಲೇ ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಿ 10 ಗಂಟೆಗೆ ಅಗ್ನಿಕುಂಡ ಪ್ರವೇಶಿಸಿದರು. ನಂತರ ಭಕ್ತರು ಕೆಂಡ ಹಾಯ್ದರು. ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಸಹಸ್ರಾರು ಭಕ್ತರು ಪ್ರಸಾದ ಸವಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.