ಕಲಬುರ್ಗಿಗೆ ಬಂದು ವಾದ ಮಂಡಿಸಿದ ಪಿ.ಚಿದಂಬರಂ

7

ಕಲಬುರ್ಗಿಗೆ ಬಂದು ವಾದ ಮಂಡಿಸಿದ ಪಿ.ಚಿದಂಬರಂ

Published:
Updated:
Deccan Herald

ಕಲಬುರ್ಗಿ: ಕೇಂದ್ರದ ಮಾಜಿ ಸಚಿವರೂ ಆಗಿರುವ ಹಿರಿಯ ವಕೀಲ ಪಿ.ಚಿದಂಬರಂ ಅವರು ಶುಕ್ರವಾರ ನಗರಕ್ಕೆ ಬಂದಿದ್ದರು.

ಭೂ ಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿ ಪರವಾಗಿ ಇಲ್ಲಿಯ ಹೈಕೋರ್ಟ್‌ ಪೀಠದಲ್ಲಿ ವಾದ ಮಂಡಿಸಿದರು.

ಹೆಲಿಕಾಪ್ಟರ್‌ ಮೂಲಕ ಬಂದಿದ್ದ ಅವರು, ಹೆಲಿಪ್ಯಾಡ್‌ನಿಂದ ನೇರವಾಗಿ ನಗರದ ಗ್ರ್ಯಾಂಡ್‌ ಹೋಟೆಲ್‌ಗೆ ಹೋಗಿ ಮಧ್ಯಾಹ್ನದ ವರೆಗೆ ಅಲ್ಲಿ ತಂಗಿದ್ದರು.

ಈ ಸಂದರ್ಭದಲ್ಲಿ ಛಾಯಾಚಿತ್ರ ತೆಗೆಯಲು ಅವಕಾಶ ನೀಡಲಿಲ್ಲ. ‘ನನಗೆ ಪ್ರಚಾರ ಬೇಡ. ಇದು ನನ್ನ ಖಾಸಗಿ ಭೇಟಿ. ದಯವಿಟ್ಟು ನೀವು ಇದನ್ನೆಲ್ಲ ಪ್ರಕಟಿಸಬೇಡಿ’ ಎಂದು ಮಾಧ್ಯಮದವರನ್ನು ಕೋರಿದರು. ಭದ್ರತೆಗೆ ನಿಯೋಜನೆಗೊಂಡಿದ್ದ ಬೆಂಗಾವಲು ಪಡೆಯನ್ನೂ ವಾಪಸ್‌ ಕಳಿಸಿದರು.

ಮಧ್ಯಾಹ್ನ 2.30ಕ್ಕೆ ಹೈಕೋರ್ಟ್‌ಗೆ ಹಾಜರಾಗಿ, ಸಂಜೆ ನಿರ್ಗಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !