ಕಲಬುರಗಿ: ‘ನವೋದಯ ಪ್ರವೇಶ ಪರೀಕ್ಷೆಗೆ ಮೂವತ್ತು ರೂಪಾಯಿ ಶುಲ್ಕ ಕಟ್ಟಲು ಪರದಾಡಿ, ಅನೇಕ ಸಮಸ್ಯೆಗಳನ್ನು ಎದುರಿಸಿ ಪೊಲೀಸ್ ಕಮಿಷನರ್ ಹುದ್ದೆ ಪಡೆಯಲು ಬಹಳಷ್ಟು ಶ್ರಮವಹಿಸಿದ್ದೆ’ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಹೇಳಿದರು.

ತಾಲ್ಲೂಕಿನ ಹಾಗರಗುಂಡಗಿ ಸರ್ಕಾರಿ ಶಾಲೆಯಲ್ಲಿ ಶನಿವಾರ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ. ಉನ್ನತ ಹುದ್ದೆಗೇರಲು ಬಾಲ್ಯದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಒಂದು ರೂಪಾಯಿ ಕೂಡ ಮನೆಯಿಂದ ಪಡೆಯದೇ ಸ್ಕಾಲರ್ಷಿಪ್ ಹಣದಿಂದ ಐಪಿಎಸ್ ಆದೆ’ ಎಂದು ಸ್ಮರಿಸಿಕೊಂಡರು.

ಸೋಲು-ಗೆಲುವು ಜೀವನದ ಭಾಗಗಳು. ಆದರೆ ಪ್ರಯತ್ನ ಮತ್ತು ಆತ್ಮವಿಶ್ವಾಸವೇ ನಿಜವಾದ ಯಶಸ್ಸಿನ ಮಂತ್ರವಾಗಿದೆ. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದಿ, ಆ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಗುವಿವಿ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ.ಪೋತೆ ವಿಶೇಷ ಉಪನ್ಯಾಸ ನೀಡಿ, ಮಕ್ಕಳು ಜೀವನದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರ ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಹಾಗರಗುಂಡಗಿಯ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಿಣಜಿಗಿಯ ಬೂದಿಬಸವೇಶ್ವರ ಸಂಸ್ಥಾನಮಠದ ಚಿದಾನಂದ ಸ್ವಾಮೀಜಿ, ಶಿಕ್ಷಣ ಪ್ರೇಮಿ ಬಳಗದ ಮುಖಂಡರಾದ ಗುರುಬಸಯ್ಯ ಹಿರೇಮಠ, ಅರವಿಂದ ಹುಣಚಿಕೇರಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗಾಳಮ್ಮ, ಉಭಯ ಶಾಲೆಯ ಎಸ್ಡಿಎಂಸಿ ಸದಸ್ಯರಾದ ಮಲ್ಲಿಕಾರ್ಜುನ ಖನ್ನಾ, ಬಸವರಾಜ ವಜಾಪೂರ ಹಾಗೂ ಗ್ರಾಮದ ಮುಖಂಡ ಸೋಮಶೇಖರ ಸಜ್ಜನ್ ಉಪಸ್ಥಿತರಿದ್ದರು.

ಶಿವಶರಣಪ್ಪ ಕುರನಳ್ಳಿ ಸ್ವಾಗತಿಸಿದರು. ಬಾಬುರಾವ ಬಿದನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದು ಪಾಟೀಲ ಪರಿಚಯಿಸಿದರು. ರಘುನಾಥ್ ಮೊಸರಬೊ ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಸೇಡಂ ವಂದಿಸಿದರು. ಗ್ರಾಮದ ಶಿಕ್ಷಣ ಪ್ರೇಮಿ ಬಳಗದ ಸದಸ್ಯರು, ಶಾಲಾ ಶಿಬ್ಬಂದಿ ವರ್ಗದವರು, ಮಕ್ಕಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.