ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲ್ಲಿನ ನಾಡಲ್ಲಿ ಕಮಲ ಅರಳಿಸಿದ ವಾಲ್ಮೀಕಿ’

ಅಭಿಮಾನಿ ಬಳಗ-, ಬಿಜೆಪಿ ಕಾರ್ಯಕರ್ತರಿಂದ ಮಾಜಿ ಶಾಸಕ ವಾಲ್ಮೀಕಿ ನಾಯಕ ಪುಣ್ಯಸ್ಮರಣೆ
Last Updated 20 ಮಾರ್ಚ್ 2023, 6:47 IST
ಅಕ್ಷರ ಗಾತ್ರ

ಚಿತ್ತಾಪುರ: ‘ವಾಲ್ಮೀಕಿ ನಾಯಕ ಅವರು ಕಲ್ಲಿನ ನಾಡಿನಲ್ಲಿ ಕಮಲ ಅರಳಿಸಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ’ ಎಂದು ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರು ಹೇಳಿದರು.

ಪಟ್ಟಣದ ಕಡೆಚೂರು ಮೈದಾನದಲ್ಲಿ ಭಾನುವಾರ ಸಂಜೆ ವಾಲ್ಮೀಕಿ ನಾಯಕ ಅವರ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಹಮ್ಮಿಕೊಂಡಿದ್ದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ ದ್ವಿತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ ಅವರು ಮಾತನಾಡಿ, ದಿ.ವಾಲ್ಮೀಕಿ ನಾಯಕ ಅವರು ತಮ್ಮ ಜೀವನವನ್ನು ಬಿಜೆಪಿ ಪಕ್ಷದ ಸಂಘಟನೆಗೆ ಸವೆಸಿದ್ದಾರೆ. ಅವರ ಸಂಘಟನೆ ಮತ್ತು ಜನಪರ ಅಭಿವೃದ್ಧಿ, ಸೇವೆಯನ್ನು ಬಿಜೆಪಿ ಪಕ್ಷ ಎಂದಿಗೂ ಮರೆಯುವುದಿಲ್ಲ. ಪಕ್ಷ ಅವರ ಕುಟುಂಬದೊಂದಿಗೆ ಇರುತ್ತದೆ. ಜನತೆಯ ಆಶೀರ್ವಾದವು ಇರಬೇಕು ಎಂದರು.

ಸಾನಿಧ್ಯ ವಹಿಸಿದ್ದ ಆಂದೋಲಾದ ಸಿದ್ಧಲಿಂಗ ಸ್ವಾಮಿಜಿ, ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಪೀಠದ ಮಲ್ಲಣಪ್ಪ ಸ್ವಾಮಿಜಿ, ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು, ಬಿಜೆಪಿ ಮುಖಂಡ ಬಸವರಾಜ ಪಂಚಾಳ್ ಅವರು ಮಾತನಾಡಿದರು.

ಮಠಾಧೀಶರಾದ ಮುನೀಂದ್ರ ಶಿವಾಚಾರ್ಯ, ಸಿದ್ಧಲಿಂಗ ಶಿವಾಚಾರ್ಯ, ಮಲ್ಲಯ್ಯ ಸ್ವಾಮಿ, ಸಂಗಮನಾಥ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ, ಸಂಗನಬಸವ ಶಿವಾಚಾರ್ಯ, ಪ್ರಣವಾನಂದ ಸ್ವಾಮಿಜಿ, ಅನೀಲ್ ಮಹಾರಾಜ, ಜಯಶ್ರೀ ಮಾತಾಜಿ, ಮೌನೇಶ್ವರ ಮಹಾರಾಜ, ಸಿದ್ಧಲಿಂಗ ಸ್ವಾಮಿ ಪೇಠಶಿರೂರ ಅವರು ಸಾನ್ನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ಸೋನುಬಾಯಿ ವಾಲ್ಮೀಕಿ ನಾಯಕ, ವಿಠಲ್ ನಾಯಕ, ಪುಣ್ಯಸ್ಮರಣೆ ಸ್ವಾಗತ ಸಮಿತಿ ಗೌರವಾಧ್ಯಕ್ಷ ಲಿಂಗಾರೆಡ್ಡಿ ಭಾಸರೆಡ್ಡಿ, ಅಧ್ಯಕ್ಷ ಚಂದ್ರಶೇಖರ ಅವಂಟಿ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಬಿಜೆಪಿ ಅಧ್ಯಕ್ಷ ನೀಲಕಂಠ ಪಾಟೀಲ್, ಮುಖಂಡರಾದ ಸೋಮಶೇಖರ ಪಾಟೀಲ್ ಬೆಳಗುಂಪಾ, ಬಸವರಾಜ ಶಿವಗೋಳ, ಬಾಬುಮಿಯ್ಯ ಕಲಗುರ್ತಿ, ಅರವಿಂದ ಚವಾಣ್, ಮಣಿಕಂಠ ರಾಠೋಡ್, ಬಸವರಾಜ ಬೆಣ್ಣೂರಕರ್, ದೇವಿಂದ್ರನಾಥ ನಾದ, ಸುರೇಶ ರಾಠೋಡ್, ಅಣ್ಣರಾವ ಬಾಳಿ, ಶಿವಲಿಂಗಪ್ಪ ವಾಡೇದ್, ಗೋಪಾಲ್ ರಾಠೋಡ್, ರಾಮದಾಸ್ ಚವಾಣ್, ನಾಗರಾಜ ಹೂಗಾರ, ಮಹೆಶ ಬಟಗಿರಿ ಅನೇಕರು ಇದ್ದರು.

ಮಲ್ಲಿಕಾರ್ಜುನ ಎಮ್ಮೆನೋರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ಜ್ಯೋತಿ ನಿರೂಪಿಸಿದರು.

ಭಾವುಕರಾದ ವಾಲ್ಮೀಕಿ ಪತ್ನಿ ಕಂಬನಿ: ಮಾಜಿ ಶಾಸಕ ದಿ. ವಾಲ್ಮಿಕಿ ನಾಯಕ ಅವರ ಭಾವಚಿತ್ರಕ್ಕೆ ವಿವಿಧ ಮಠಾಧೀಶರು ಮತ್ತು ರಾಜಕೀಯ ಗಣ್ಯರು ಪುಷ್ಪನಮನ ಸಲ್ಲಿಸುವಾಗ ಸೋನುಬಾಯಿ ವಾಲ್ಮೀಕಿ ನಾಯಕ ಅವರು ಭಾವುಕರಾಗಿ ವಾಲ್ಮೀಕಿ ಚಿತ್ರದೆದುರು ಕುಳಿತು ಮುಖಕ್ಕೆ ಸೆರಗು ಹಿಡಿದುಕೊಂಡು ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT