ಸೋಮವಾರ, ಸೆಪ್ಟೆಂಬರ್ 20, 2021
20 °C

ಕಲಬುರ್ಗಿ: ಹೊಸ ಶಿಕ್ಷಣ ನೀತಿ ಖಂಡಿಸಿ ನಾಳೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ’ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಕಾನ್ಫಡರೇಷನ್ ವತಿಯಿಂದ ಸೆ. 30ರಂದು ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲೆಯಲ್ಲೂ ಪ್ರತಿಭಟನಾ ಪ್ರದರ್ಶನ ಮಾಡಲಾಗುವುದು‘ ಎಂದು ಕಾನ್ಫಡರೇಷನ್ ಮಹಾಕಾರ್ಯದರ್ಶಿ ಎಂ.ಬಿ.ಸಜ್ಜನ ತಿಳಿಸಿದರು.

’ದೇಶದ ಎಲ್ಲ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರು ಹೊಸ ಶಿಕ್ಷಣ ನೀತಿಗೆ ವಿರೋಧಿಸಿದ್ದು, ಅಂದು ಆಯಾ ವಿಶ್ವವಿದ್ಯಾಲಯಗಳಲ್ಲಿ 2 ತಾಸಿನ ಮುಷ್ಕರ ನಡೆಸಿ ಈ ಶಿಕ್ಷಣ ನೀತಿಯನ್ನು ತಡೆ ಹಿಡಿಯುವಂತೆ ಕೋರಿ ಕುಲಪತಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು‘ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಗುಣಮಟ್ಟ ಕುಸಿಯಲಿದೆ. ಶಿಕ್ಷಣದ ಸೌಲಭ್ಯ ಮತ್ತು ಅವಕಾಶಗಳು ಹಾಗೂ ಪ್ರವೇಶಗಳಲ್ಲಿ ತಾರತಮ್ಯಗಳು ಹೆಚ್ಚಾಗಲಿವೆ. ಶಿಕ್ಷಣವು ಸಹವರ್ತಿ ಪಟ್ಟಿಯಲ್ಲಿದ್ದರೂ ರಾಜ್ಯ ಸರ್ಕಾರಗಳನ್ನು ಕಡೆಗಣಿಸಿ ಅವುಗಳ ಹಕ್ಕುಗಳನ್ನು ಮೊಟಕುಗೊಳಿಸಲಿದೆ‘ ಎಂದು ದೂರಿದರು.

’ಈ ಹೊಸ ನೀತಿಯು ಶಿಕ್ಷಣದಲ್ಲಿ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಹೆಚ್ಚು ಅವಕಾಶ ನೀಡುತ್ತದೆ. ಸಾರ್ವಜನಿಕ ಶಿಕ್ಷಣವನ್ನು ನಿರ್ನಾಮ ಮಾಡುವ ದುರುದ್ದೇಶ ಇದರಲ್ಲಿದೆ. ಇಡೀ ಶಿಕ್ಷಣ ವ್ಯವಸ್ಥೆಯ ಕೇಂದ್ರೀಕರಣ ಮಾಡಿ, ಅದರಲ್ಲಿ ಕೋಮುವಾದ ಬೆರೆಸುವ ಉದ್ದೇಶ ಇದರ ಹಿಂದಿದೆ‘ ಎಂದು ದೂರಿದರು.

ಮುಖಂಡ ಕೆ.ಜಿ ಕಿಣ್ಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು