ಸೋಮವಾರ, ಏಪ್ರಿಲ್ 12, 2021
24 °C
ಆನೆಗೊಂದಿ ವ್ಯಾಜಸರಾಜತೀರ್ಥರ ವೃಂದಾವನ ಧ್ವಂಸ ಪ್ರಕರಣ

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ವ್ಯಾಸರಾಜ ತೀರ್ಥರ ನವವೃಂದಾವನವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಪೇಜಾವರಶ್ರೀ ಸೇನೆ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿಜಯನಗರ ಸಾಮ್ರಾಜ್ಯದ ಚಕ್ರಾಧಿಪತಿ ಶ್ರೀಕೃಷ್ಣದೇವರಾಯನಿಗೆ ಸಂಕಟ ಎದುರಾದಾಗ ಅದರಿಂದ ಮುಕ್ತವಾಗುವ ಸಲುವಾಗಿ ಕೃಷ್ಣದೇವರಾಯ ವ್ಯಾಸರಾಜರನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ ಶ್ರೇಷ್ಠ ಪರಂಪರೆ ನವವೃಂದಾವನಕ್ಕಿದೆ. ದುಷ್ಕರ್ಮಿಗಳು ದುರಾಸೆ ಮತ್ತು ಧನದಾಹದಿಂದ ನಿಧಿಗಾಗಿ ನವವೃಂದಾವನವನ್ನು ಧ್ವಂಸಗೊಳಿಸಿದ್ದಾರೆ. ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚದಿದ್ದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪೇಜಾವರಶ್ರೀ ಸೇನೆ ಅಧ್ಯಕ್ಷ ಎಂ.ಎಸ್‌.ಪಾಟೀಲ ನರಿಬೋಳ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಆರ್‌. ಹಾಗರಗಿ, ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ, ಮುಖಂಡರಾದ ರಮೇಶ ಕುಲಕರ್ಣಿ, ಶ್ವೇತಾ ಸಿಂಗ್‌, ವೀರೇಂದ್ರ ಮಂಠಾಳೆ, ಗುರುರಾಜ ಕುಲಕರ್ಣಿ, ರಾಜೇಶ ಹಾಗರಗಿ, ಬಾಬುರಾವ್‌ ಬಸಂತವಾಡಿ, ಶರಣಗೌಡ ಪಾಟೀಲ ಹರಸೂರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.