ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಪುರಸಭೆಗೆ ₹2.28 ಕೋಟಿ ತೆರಿಗೆ ಸಂದಾಯ

ವಿಶೇಷ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಮಾಹಿತಿ
Last Updated 19 ಮೇ 2022, 2:56 IST
ಅಕ್ಷರ ಗಾತ್ರ

ವಾಡಿ: ಎಸಿಸಿ ಸಿಮೆಂಟ್ ಕಾರ್ಖಾನೆ 2022-23ನೇ ಸಾಲಿನ ₹2.28 ಕೋಟಿ ವಾರ್ಷಿಕ ತೆರಿಗೆ ಸಲ್ಲಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಅನುದಾನ ಬಂದಿದ್ದು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸಭೆಗೆ ಮಾಹಿತಿ ನೀಡಿದರು.

2022-23ನೇ ಸಾಲಿನ ಎಸ್‌.ಎಫ್.ಸಿ ಸೇರಿದಂತೆ ವಿವಿಧ ಅನುದಾನಗಳ ಕ್ರಿಯಾಯೋಜನೆ ರೂಪಿಸಲು ಕರೆಯಲಾದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಎಸ್‌ಎಫ್‌ಸಿ ಯೋಜನೆಯ ₹99 ಲಕ್ಷ ಅನುದಾನ, 15ನೇ ಹಣಕಾಸು ಯೋಜನೆಯ ₹2.52 ಕೋಟಿ ಹಾಗೂ ಪುರಸಭೆಯ ₹2.83 ಕೋಟಿ ಅನುದಾನ ಲಭ್ಯವಿದ್ದು, ಕ್ರಿಯಾಯೋಜನೆ ರೂಪಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.

ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ, ಒಳಚರಂಡಿ, ಪ.ಜಾ 17 ಲಕ್ಷ, ಪ.ಪಂ 7 ಲಕ್ಷ, ಇತರೆ ಹಿಂದುಳಿದ ವರ್ಗಕ್ಕೆ 5.62, ಅಂಗವಿಕಲರಿಗೆ 3.75 ಲಕ್ಷ, ಪೌರಕಾರ್ಮಿಕರಿಗೆ 60 ಲಕ್ಷ, ಸಿಬ್ಬಂದಿ ವೇತನಕ್ಕಾಗಿ 5.63 ಲಕ್ಷ ವ್ಯಯಿಸಬೇಕಾಗಿದೆ. ಪುರಸಭೆಗೆ ಸ್ಥಳೀಯ ಎಸಿಸಿ ಕಾರ್ಖಾನೆಯಿಂದ ವಾರ್ಷಿಕ ತೆರಿಗೆ ₹2.28 ಕೋಟಿ ಸಹಿತ ಒಟ್ಟು ₹2.83 ಕೋಟಿ ಸಂಗ್ರಹವಾಗಿದೆ ಎಂದರು.

ನಿಮ್ಮ ಅಭಿವೃದ್ಧಿ ಕೇವಲ ಕಾಗದಕ್ಕೆ ಸಿಮೀತವಾಗಿದೆ. ಪುರಸಭೆ ವತಿಯಿಂದ ಪಟ್ಟಣದ ಯಾವ ಭಾಗ ಅಭಿವೃದ್ಧಿ ಮಾಡಿದ್ದೀರಿ ಮಾಹಿತಿ ನೀಡಿ ಎಂದು ವಿರೋಧ ಪಕ್ಷದ ಸದಸ್ಯರು ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಪುರಸಭೆಗೆ ಸಾಧ್ಯವಾಗಿಲ್ಲ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು.

ಅಧ್ಯಕ್ಷೆ ಝರೀನಾ ಬೇಗಂ ಅಧ್ಯಕ್ಷತೆ ವಹಿಸಿದ್ದರು.ವಿರೋಧಪಕ್ಷದ ನಾಯಕ ಭೀಮಶಾ ಜಿರೊಳ್ಳಿ, ದೇವೀಂದ್ರ ಕರದಳ್ಳಿ, ಮಲ್ಲಯ್ಯ ಗುತ್ತೇದಾರ, ಸುಗಂದಾ ನಾಗೇಂದ್ರ, ಗುಜ್ಜಾಬಾಯಿ ಸಿಂಗೆ, ಮೈನಾಬಾಯಿ ರಾಠೋಡ, ಜೈನಾಬಾಯಿ ಸೋಮ, ಮಹಮ್ಮದ್ ಗೌಸ್, ಶರಣು ನಾಟೇಕಾರ, ಭೀಮರಾಯ ನಾಯ್ಕೋಡಿ, ರವಿ ನಾಯಕ, ವೀರಣ್ಣ ಯಾರಿ, ಕಿಶನ ಜಾಧವ, ಮಲ್ಲಿಕಾರ್ಜುನ, ಪಂಕಜಾ ಎ, ರೂಪಾ, ಲತಾಮಣಿ, ಬಸವರಾಜ ಪೂಜಾರಿ, ಮನೋಜ ಹಿರೋಳ್ಳಿ, ಮಲ್ಲಿಕಾರ್ಜುನ ಯಳಸಂಗಿ, ಅಶೋಕ ಪುಟಪಾಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT