ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಬಚ್ಚಲು ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Last Updated 13 ಜೂನ್ 2022, 3:18 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರಗಿ ಜಿಲ್ಲೆ): ಇಲ್ಲಿಗೆ ಸಮೀಪದ ಮುಡಬೂಳ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ಮಧ್ಯರಾತ್ರಿ ಜರುಗಿದೆ.

ಜಗಳದಲ್ಲಿ ವಿಶ್ವನಾಥ ಅಣ್ಣಾರಾವ್ ಸಂಗಾವಿ (30) ಎಂಬುವವರು ಕೊಲೆಯಾಗಿದ್ದಾರೆ. ಮಾರಕಾಸ್ತ್ರಗಳಿಂದ ಹೊಟ್ಟೆ, ತಲೆ ಮತ್ತು ಕತ್ತಿಗೆಗೆ ಹೊಡೆದಿದ್ದರಿಂದ ವಿಶ್ವನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಚಿತ್ತಾಪುರ ಪೊಲೀಸ್ ಠಾಣೆಯ ಸಿಪಿಐ ಪ್ರಕಾಶ ಯಾತನೂರ, ಪಿಎಸ್ಐ ಎ.ಎಸ್ ಪಟೇಲ್ ಅವರು ಸಿಬ್ಬಂದಿಯೊಂದಿಗೆ ರಾತ್ರಿ ಮುಡಬೂಳ ಗ್ರಾಮಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಕೊಲೆಯಾದ ವಿಶ್ವನಾಥ ಶವವನ್ನು ಪರೀಕ್ಷೆಗೆಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊಲೆ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿದೆ.

ಘಟನೆಯ ವಿವರ: ಸಣ್ಣೂರಕರ್ ಕುಟುಂಬದವರ ಮನೆಯ ಬಚ್ಚಲು ನೀರು ಭಾಗೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಚೆಗಿನ ಚರಂಡಿಗೆ ಸೇರಿಸುವ ಕುರಿತು ಅಪ್ಪೊಜಿ ಕುಟುಂಬದವರಿಂದ ತಕರಾರು ಉಂಟಾಗಿತ್ತು. ನಂತರ ಸಣ್ಣೂರಕರ್ ಕುಟುಂಬದವರ ಮತ್ತು ಸಂಗಾವಿ ಕುಟುಂಬದವರ ನಡುವೆ ಜಗಳ ಶುರುವಾಗಿ ಮಾರಕಾಸ್ತ್ರ ಝಳಪಿಸುವ ಹಂತಕ್ಕೆ ತಿರುಗಿ ಭೀಕರವಾಗಿ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಹತ್ತು ಗಂಟೆಗೆ ಜಗಳ ಶುರುವಾಗಿ ತಣ್ಣಗಾಗಿತ್ತು. ಮತ್ತೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಜಗಳ ಶುರುವಾಗಿದೆ. ಆಗ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ವಿಶ್ವನಾಥ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT