ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಜಿಟಿಜಿಟಿ ಮಳೆ: ಕೃಷಿ ಚಟುವಟಿಕೆ ಬಿರುಸು

Published 26 ಜುಲೈ 2023, 16:46 IST
Last Updated 26 ಜುಲೈ 2023, 16:46 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕಿನಲ್ಲಿ ಮತ್ತೆ ಬುಧವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯಲಾರಂಭಿಸಿದೆ. ಈಗಾಗಲೇ ಒಂದು ವಾರ ಸುರಿದ ಜಿಟಿಜಿಟಿ ಮಳೆಯಿಂದ ಜನತೆ ಬೇಸತ್ತು ಹೋಗಿದ್ದಾರೆ. ಆದರೆ ತಡವಾಗಿ ಮುಂಗಾರು ಆಗಮಿಸಿದ್ದರಿಂದ ಮಳೆಯ ನಡುವೆ ಕೃಷಿ ಚಟುವಟಿಕೆ ಬಿರುಸು ಪಡೆದುಕೊಂಡಿದೆ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿಗೆ ಇದು ಸಕಾಲ. ಹಳ್ಳ ಹಾಗೂ ನೀರಿನ ಲಭ್ಯತೆ ಇರುವ ರೈತರು ಈಗಾಗಲೇ ತಮ್ಮ ಗದ್ದೆಗಳಲ್ಲಿ ನೀರು ಸಂಗ್ರಹಿಸಿ ಭೂಮಿ ಹದಗೊಳಿಸಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ರಾಜ್ಯಗಳ ಕಾರ್ಮಿಕ ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿ ಬಿಡಾರ ಹೂಡಿದ್ದು, ಭತ್ತ ನಾಟಿ ಶುರು ಮಾಡಿದ್ದಾರೆ.

ಬೆಳಿಗ್ಗೆಯಿಂದ ಶುರುವಾದ ಮಳೆ ಆಗಾಗ ತುಸು ವಿರಾಮ ನೀಡಿ ಮತ್ತೆ ಸುರಿಯಿತು. ಶಾಲಾ ಮಕ್ಕಳು, ಕೃಷಿ ಕೆಲಸಕ್ಕೆ ತೆರಳಿದ ಮಹಿಳೆಯರು ಮಳೆಯಲ್ಲಿ ನೆನೆಯುತ್ತಾ ಮರಳಿ ಗೂಡು ಸೇರಿದರು.

‘ಜಿಟಿಜಿಟಿ ಮಳೆಯಿಂದ ವಾತಾವರಣ ತಂಪಾಗಿದೆ. ಶೀತಗಾಳಿಯಿಂದ ಚಿಕ್ಕ ಮಕ್ಕಳಲ್ಲಿ ನೆಗಡಿ–ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡಿದೆ’ ಎಂದು ನಿವಾಸಿ ಬಸಮ್ಮ ತಿಳಿಸಿ ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT