‘ನ.29ರಂದು ಪ್ರಧಾನ ಆಶೀರ್ವಚನ’
‘ನ.29ರಂದು ಪೂರ್ಣಾಹುತಿ ಬಳಿಕ ಬೆಳಿಗ್ಗೆ 11.30 ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನಡೆಯಲಿದೆ. ಬೀದರ್‌ನ ಸಿದ್ಧರೂಢಾಶ್ರಮದ ಶಿವಕುಮಾರ ಸ್ವಾಮೀಜಿ ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಬೆಂಗಳೂರಿನ ಮಧುಸೂದಾನಂದ ಪುರಿ ಸೇರಿದಂತೆ ಹಲವು ಸ್ವಾಮೀಜಿಗಳು ಪಾಲ್ಗೊಳ್ಳುವರು. ಮಧ್ಯಾಹ್ನ 3ರಿಂದ ನಡೆಯುವ ಆಶೀರ್ವಚನದಲ್ಲಿ ವಿಜಯಪುರದ ನಿರ್ಭಯಾನಂದ ಸ್ವಾಮೀಜಿ ಸೇರಿದಂತೆ ಹಲವು ಮಹನೀಯರು ಪಾಲ್ಗೊಳ್ಳುವರು’ ಎಂದು ಮಹೇಶ್ವರಾನಂದ ಸ್ವಾಮೀಜಿ ಹೇಳಿದರು.