ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ | ರಾಮ–ಸೀತೆ ವೇಷದಲ್ಲಿ ಮಿಂಚಿದ ಮಕ್ಕಳು

Published 30 ಡಿಸೆಂಬರ್ 2023, 15:56 IST
Last Updated 30 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಚಿಂಚೋಳಿ: ಜ.22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ಭಜನೆ, ಪಲ್ಲಕ್ಕಿ ಉತ್ಸವ ಹಾಗೂ ರಾಮ–ಸೀತೆ ವೇಷಧಾರಿ ಮಕ್ಕಳ ಮೆರವಣಿಗೆ, ಭಜನೆಯೊಂದಿಗೆ ಶೋಭಾ ಯಾತ್ರೆ ವೈಭವದಿಂದ ಜರುಗಿತು.

ಚಂದನಕೇರಾ ಬೃಂಗಿ ಪಾಚೇಶ್ವರ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವಹಿಂದೂ ಪರಿಷತ್ತಿನ ನೂರಾರು ಮುಖಂಡರು ಪಾಲ್ಗೊಂಡಿದ್ದರು.

ಪಟ್ಟಣದ ಬಸ್ ನಿಲ್ದಾಣದ ಎದುರುಗಡೆಯಿಂದ ಪ್ರಾರಂಭವಾದ ಶೋಭಾಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾಂತೇಶ್ವರ ಮಠ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಅಶೋಕ ಪಾಟೀಲ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ರಾಧಾಬಾಯಿ ಓಲಗೇರಿ, ನಿವೃತ್ತ ಶಿಕ್ಷಕಿ ಶ್ರೀದೇವಿ ಪಾಟೀಲ, ಹಿರಿಯರಾದ ಸಂಜಯ ಮಿಷ್ಕಿನ್, ಭೀಮಶೆಟ್ಟಿ ಮುರುಡಾ, ರೇವಣಸಿದ್ದ ಮೋಘಾ, ಹರ್ಷವರ್ಧನ ಮ್ಯಾಕಲ್, ಮಲ್ಲಿಕಾರ್ಜುನ ಉಡುಪಿ, ರಾಮರಡ್ಡಿ ಪಾಟೀಲ, ಅಶೋಕ ಚವ್ಹಾಣ, ಸತೀಶರಡ್ಡಿ ತಾಜಲಾಪುರ, ಶ್ರೀನಿವಾಸ ಚಿಂಚೋಳಿಕರ್, ರವಿಕಾಂತ ಹುಸೇಬಾಯಿ, ಕಾಶಿನಾಥ ನಾಟಿಕಾರ, ಶ್ರೀಹರಿ ಕಾಟಾಪುರ, ಶಿವಯೋಗಿ ರುಸ್ತಂಪುರ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT