ಕಲಬುರಗಿ: ಗ್ರಾಮೀಣ ಪರಿಸರದಲ್ಲಿ ರಂಗಕಲೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ರಂಗ ಗೌರವ ನೀಡುವ ಉತ್ತಮ ಕೆಲಸವನ್ನು ರಂಗಾಯಣ ಮಾಡುತ್ತಿದೆ ಎಂದು ಹಿರಿಯ ಕಲಾವಿದೆ ಮಂಜುಳಾ ಜಾನೆ ಹೇಳಿದರು.
ರಂಗಾಯಣ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಬಗೆಯ ರಂಗ ಪ್ರಕಾರಗಳಲ್ಲಿ ಕಾರ್ಯಕ್ರಮ ರೂಪಿಸುತ್ತಿರುವ ಕಲಬುರಗಿ ರಂಗಾಯಣ ನಾಡಿನಾದ್ಯಂತ ಗುರುತಿಸುವ ಕೆಲಸ ಮಾಡಿದೆ ಎಂದರು.
ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿಯ ನಾಗೇಂದ್ರ ನಾಟ್ಯ ಸಂಘದ ರೂವಾರಿ ನಾಗಪ್ಪಯ್ಯ ಸ್ವಾಮಿ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ಸ್ವಾಮಿಗಳು, ಹಳ್ಳಿಯೊಂದರಲ್ಲಿ ನನ್ನ ಪಾಡಿಗೆ ನಾನು ನಾಟಕಗಳಿಗೆ ಸಂಗೀತ ನೀಡುತ್ತಾ ಬಂದಿರುವುದನ್ನು ಗುರುತಿಸಿದ ರಂಗಾಯಣಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿ ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಎಂ.ಬಿ. ಪಾಟೀಲ, ರೇಖಾ ನಾಗಪ್ಪಯ್ಯ ಉಪಸ್ಥಿತರಿದ್ದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿದರು.
ಡಾ.ಸಂದೀಪ ನಿರೂಪಣೆ ಮಾಡಿದರು. ವಿಶ್ವರಂಗಭೂಮಿ ಸಂದೇಶವನ್ನು ರಂಗನಿರ್ದೇಶಕ ವಿಶ್ವರಾಜ ಪಾಟೀಲ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.