ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸವಿತಾ ಸಮುದಾಯ ಭವನ ನಿರ್ಮಿಸಿ’

ಸವಿತಾ ಸಮಾಜದಿಂದ ಶಾಸಕ ಎಂ.ವೈ.ಪಾಟೀಲರಿಗೆ ಮನವಿ
Last Updated 3 ಫೆಬ್ರುವರಿ 2020, 8:30 IST
ಅಕ್ಷರ ಗಾತ್ರ

ಅಫಜಲಪುರ: ಸವಿತಾ ಸಮಾಜದವರು ಉಚಿತವಾಗಿ ನಿವೇಶನ ನೀಡಿದರೆ ಸರ್ಕಾರದಿಂದ ಸವಿತಾ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲ ಭರವಸೆ ನೀಡಿದರು.

ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸವಿತಾ ಸಮಾಜ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜದ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸವಿತಾ ಸಮಾಜದ ಮುಖಂಡ ರಮೇಶ ನಾವಿ ಮಾತನಾಡಿ, ಸಮುದಾಯ ಭವನ ನಿರ್ಮಾಣ ಸಮಾಜದ ಬಹುದಿನಗಳ ಬೇಡಿಕೆಯಾಗಿದೆ. ಯಾವುದೇ ಕಾರ್ಯಕ್ರಮವನ್ನು ಒಂದೆಡೆ ಸೇರಿ ಮಾಡಲು ಸರಿಯಾದ ಸ್ಥಳವಿಲ್ಲದೇ ಅಲೆದಾಡುತ್ತಿದ್ದೇವೆ. ಹೀಗಾಗಿ ಶಾಸಕರು ಖಾಲಿ ನಿವೇಶನ ನೀಡಿ ಭವನ ನಿರ್ಮಾಣ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡರು

ಅಫಜಲಪುರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಸವಿತಾ ಸಮಾಜ ತಾಲ್ಲೂಕು ಘಟಕದ ಕಾರ್ಯದರ್ಶಿ ಪಾಂಡರಂಗ ನಾವಿ, ತಹಶೀಲ್ದಾರ ಯಲ್ಲಪ್ಪ ಸುಬೇದಾರ, ಸವಿತಾ ಸಮಾಜದ ಉಪಾಧ್ಯಕ್ಷ ದತ್ತು ಪೂಜಾರಿ, ಮಹಾಂತೇಶ ಅಡೆಕೆ, ಸಂಜುಕುಮಾರ, ಅಶೋಕ ಮಾನೆ, ಮನೋಹರ, ಬಾಲಾಜಿ, ಅಂಬಾರಾಯ ನಾವಿ, ಹಾಜಿ ಮುಜಾವರ, ನಂದು ನಾವಿ, ಸುರೇಶ ನಾವಿ, ಬಸವರಾಜ ನಾವಿ ಮತ್ತು ಸವಿತಾ ಸಮಾಜ ಮೂಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT