ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇವಣಸಿದ್ದೇಶ್ವರ ಗುಡ್ಡ: ಹುಂಡಿಯಲ್ಲಿ ₹37.94 ಲಕ್ಷ ಸಂಗ್ರಹ

Published : 29 ಸೆಪ್ಟೆಂಬರ್ 2024, 15:41 IST
Last Updated : 29 ಸೆಪ್ಟೆಂಬರ್ 2024, 15:41 IST
ಫಾಲೋ ಮಾಡಿ
Comments

ಕಾಳಗಿ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಭಕ್ತರ ಕಾಣಿಕೆಯ ಆರು ತಿಂಗಳ ಹುಂಡಿ ಪೆಟ್ಟಿಗೆಯನ್ನು ಶುಕ್ರವಾರ ತೆರೆಯಲಾಯಿತು.

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸೇಡಂ ಸಹಾಯಕ ಆಯುಕ್ತರ ಪರವಾಗಿ ಉಪತಹಶೀಲ್ದಾರ್ ನಾಗನಾಥ ತರಗೆ ನೇತೃತ್ವದಲ್ಲಿ ಪೆಟ್ಟಿಗೆ ತೆರೆದು ನೋಟು, ನಾಣ್ಯ ಎಣಿಕೆ ಮಾಡಲಾಯಿತು.

ಸಂಗ್ರಹವಾಗಿದ್ದ ₹34,94,560 ನಗದು, 35 ಗ್ರಾಂ ಬಂಗಾರ, 745 ಗ್ರಾಂ ಬೆಳ್ಳಿಯನ್ನು ದೇವಸ್ಥಾನದ ಬ್ಯಾಂಕ್ ಖಾತೆ ಹೊಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ರೇವಗ್ಗಿ ಶಾಖೆಗೆ ಜಮೆ ಮಾಡಲಾಯಿತು.

ಕಾಳಗಿ ತಹಶೀಲ್ದಾರ್ ಘಮಾವತಿ ರಾಠೋಡ, ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಬಸವಣಪ್ಪ ಹೂಗಾರ, ಕಾರ್ಯದರ್ಶಿ ಸದಾಶಿವ ವಗ್ಗೆ, ಕಂದಾಯ ಇಲಾಖೆ-ದೇವಸ್ಥಾನ ಸಿಬ್ಬಂದಿ, ಗ್ರಾಮ ಸೇವಕರು, ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಎಣಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT