ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವ ರೆಡ್ಡಿ, ಪೂರ್ವಿ ಮಿಂಚು: ವಿದ್ಯಾಸಾಗರ ಪಾರಮ್ಯ

Published 10 ಸೆಪ್ಟೆಂಬರ್ 2023, 6:12 IST
Last Updated 10 ಸೆಪ್ಟೆಂಬರ್ 2023, 6:12 IST
ಅಕ್ಷರ ಗಾತ್ರ

ಕಲಬುರಗಿ: ಮಂದ ಗಾಳಿಯಲ್ಲಿ ಚಂದನೆಯ ಸ್ಕೇಟಿಂಗ್ ಮಾಡಿದ ಬೆಂಗಳೂರಿನ ಧ್ರುವ ರೆಡ್ಡಿ ಮತ್ತು ಪೂರ್ವಿ ಎಸ್‌. ಮಟ್ಟೆ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಮೂರನೇ ರೋಲರ್ ಸ್ಕೇಟಿಂಗ್ (ರಸ್ತೆ) ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಆಕರ್ಷಣೆಯ ಕೇಂದ್ರ ಬಿಂದುವಾದರು.

ಕರ್ನಾಟಕ ರೋಲರ್ ಸ್ಕೇಟಿಂಗ್ ಸಂಸ್ಥೆಯ ಆಶ್ರಯದಲ್ಲಿ ಕಲಬುರಗಿ ಜಿಲ್ಲಾ ರೋಲರ್ ಸ್ಕೇಟಿಂಗ್ ಸಂಸ್ಥೆಯು ನಗರದ ಮೂರನೇ ಹಂತದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಎರಡನೇ ದಿನ ಧ್ರುವ ಹಾಗೂ ಪೂರ್ವಿ 14ರಿಂದ 17 ವರ್ಷದೊಳಗಿನವರ ಇನ್‌ಲೈನ್‌ ವಿಭಾಗದ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು.

ನಿಗದಿತ 500 ಮೀಟರ್ಸ್ ದೂರವನ್ನು ಧ್ರುವ 1 ನಿಮಿಷ 34.32 ಸೆಕೆಂಡುಗಳಲ್ಲಿ ತಲುಪಿದರು. ಇಷ್ಟೇ ದೂರ ಗುರಿ ಮುಟ್ಟಲು ಪೂರ್ವಿ ಅವರಿಗೆ ಕೇವಲ 1 ನಿ. 41 ಸೆ. ಹಿಡಿಯಿತು. ಇದೇ ವಯೋಮಿತಿಯ ಪಿಟಿಪಿ ಎಲಿಮಿನೇಷನ್‌ನಲ್ಲೂ ಇವರಿಬ್ಬರೂ ಅಗ್ರಸ್ಥಾನ ಅಲಂಕರಿಸಿದರು.

17 ವರ್ಷಕ್ಕಿಂತ ಮೇಲಿನವರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾಸಾಗರ ಅವರ ಪಾರಮ್ಯ ಕಂಡುಬಂದಿತು.

ಫಲಿತಾಂಶಗಳು:

ಬಾಲಕರು:ಕ್ವಾಡ್‌ (500 ಮೀ.)

5–7 ವರ್ಷ: ಹರ್ಷಿವ್‌ (ಕಾಲ: 1 ನಿ.15.16 ಸೆ.)–1, ಶೌರ್ಯ ಕೌಶಿಕ್ ರಾವ್‌–2, ಶಯಂತ್‌ ಎನ್.ವಿ.–3 (ಎಲ್ಲರೂ ಬೆಂಗಳೂರು)

7–9 ವರ್ಷ: ಅವಧೂತ್ ಮೋರೆ (ಬೆಳಗಾವಿ, ಕಾಲ: 1 ನಿ. 5.69 ಸೆ.)–1, ರೋಹನ್ ಎಸ್‌.ಆರ್‌. (ತುಮಕೂರು)–2, ಅಭಿರಾಮ್ (ಬೆಂಗಳೂರು)–3

9–11 ವರ್ಷ: ಅರ್ಜುನ್ ಎಸ್‌. ಕುಮಾರ್ (ಕಾಲ: 1 ನಿ. 05 ಸೆ.)–1, ಯಶ್ವಿನ್ ಸಂತೋಷ್‌–2, ಆರುಷ್‌ ಬೆಳ್ಳಿಯಪ್ಪ–3 (ಎಲ್ಲರೂ ಬೆಂಗಳೂರು)

ಕ್ವಾಡ್‌ (1000 ಮೀ.): 11–14 ವರ್ಷ: ಸೌರಭ್ ಎಸ್‌. ಸಲೋಕೆ (ಬೆಳಗಾವಿ, ಕಾಲ: 1 ನಿ. 36.03 ಸೆ.)–1, ರುಥವ್ ಪ್ರದೀಪ್‌ (ಬೆಂಗಳೂರು)–2, ಅಜಯ್ ಸಾತ್ಯಕಿ (ಬೆಂಗಳೂರು)–3

14–17 ವರ್ಷ: ವಿಜಯ್‌ ಜಿ. (ಮೈಸೂರು, 1 ನಿ. 29.25 ಸೆ.)–1, ವಿವಾನ್ ಜೈನ್‌ –2, ಮುಕುಂದ್ ಯಾದವ್‌–3 (ಇಬ್ಬರೂ ಬೆಂಗಳೂರು)

17 ವರ್ಷಕ್ಕಿಂತ ಮೇಲಿನವರು: ರೇವಂತ್ ಜಿ.ವಿ. (ಕಾಲ: 1 ನಿ. 48.07 ಸೆ.)–1, ದುಷ್ಯಂತ್–2 (ಇಬ್ಬರೂ ಬೆಂಗಳೂರು), ಕಿರಣ್ ರೆಡ್ಡಿ ಎಸ್‌.ಎಂ. (ಚಿಕ್ಕಬಳ್ಳಾಪುರ)–3

ಇನ್‌ಲೈನ್‌ (500 ಮೀ.): 5–7 ವರ್ಷ: ಸ್ಪರ್ಶ್ ಶರ್ಮಾ (ಕಾಲ: 1 ನಿ. 9.25 ಸೆ.)–1, ವೇದಾಂಶ ರಾವ್‌–2, ಲಕ್ಷಿತ್‌–3 (ಎಲ್ಲರೂ ಬೆಂಗಳೂರು)

7–9 ವರ್ಷ: ಸಮರ್ಥ್ ಸಂತೋಷ್‌ (ಬೆಂಗಳೂರು, ಕಾಲ: 59.66 ಸೆ.)–1, ಮೌರ್ಯ ಕಿರಣ್ ಬಂಜನ್‌ (ದ.ಕ.)–2, ಧನುಷ್ ಗೌಡ (ಬೆಂಗಳೂರು)–3

9–11 ವರ್ಷ: ಮಹಾಂತ್ ಡಿ. (ಕಾಲ: 59.84 ಸೆ.)–1, ಪ್ರದ್ಯುಮ್ನ ಮುತ್ತು–2, ಮನ್ವಿಕಾ ಕಲ್ಲಾ–3 (ಮೂವರೂ ಬೆಂಗಳೂರು)

11–14 ವರ್ಷ: ಮಾರುತಿ ನಾಯ್ಕ್ ಎಲ್‌.ಪಿ. (ಕಾಲ: 1 ನಿ. 42.62 ಸೆ.)–1, ಎನ್‌.ಸಾಯಿ ರಿತ್ವಿಕ್‌–2, ಸಾಯಿ ಸಿದ್ದಾರ್ಥ್ –3 (ಎಲ್ಲರೂ ಬೆಂಗಳೂರು)

14–17 ವರ್ಷ: ಧ್ರುವ ರೆಡ್ಡಿ (ಕಾಲ: 1 ನಿ. 34.32 ಸೆ.)–1, ಶ್ರೀಹರಿ ಸಂಪತ್‌ –2, ಧನುಷ್‌–3 (ಮೂವರೂ ಬೆಂಗಳೂರು)

17 ವರ್ಷಕ್ಕಿಂತ ಮೇಲಿನವರು: ಜಾಚರಿ ವಿದ್ಯಾಸಾಗರ (ಕಾಲ: 1 ನಿ. 47.93 ಸೆ.)–1, ಮಧು ಚಂದ್ರ ಸಿ.ಎಂ.–2 (ಇಬ್ಬರೂ ಬೆಂಗಳೂರು)

ಪಿಟಿಪಿ+ಎಲಿಮಿನೇಷನ್‌ (15,000 ಮೀ.): 14–17 ವರ್ಷ: ಧ್ರುವ ರೆಡ್ಡಿ–1, ಶ್ರೀಹರಿ ಸಂಪತ್‌–2, ಧನುಷ್‌–3 (ಎಲ್ಲರೂ ಬೆಂಗಳೂರು)

17 ವರ್ಷಕ್ಕಿಂತ ಮೇಲಿನವರು: ಜಾಚರಿ ವಿದ್ಯಾಸಾಗರ–1, ಮಧು ಚಂದ್ರ ಸಿ.ಎಂ.–2 (ಇಬ್ಬರೂ ಬೆಂಗಳೂರು)

ಬಾಲಕಿಯರು: ಕ್ವಾಡ್‌ 500 ಮೀ.

5–7 ವರ್ಷ: ಚರಿತ್ರಿಯಾ ವಿ. (ಬೆಂಗಳೂರು, 1 ನಿ. 19.69 ಸೆ.)–1, ಸರು ಕಟ್ಟೆ (ತುಮಕೂರು)–2, ಪುನರ್ವಿ ಕುಮಾರ್ (ಬೆಂಗಳೂರು)–3

7–9 ವರ್ಷ: ಲೇಖನಾ ಗೌಡ ವಿ.ಎ. (ಬೆಂಗಳೂರು, 1 ನಿ. 9.60 ಸೆ.)–1, ಕಾಟೆ ಆರ್ವಿ ವಾಜ್‌ (ದಕ್ಷಿಣ ಕನ್ನಡ)–2, ದುರ್ವಾ ಎಸ್‌. ಪಟೇಲ್‌ (ಬೆಳಗಾವಿ)–3

9–11 ವರ್ಷ: ಅದಿತಿ ಪಾಲ್ (ಬೆಂಗಳೂರು, 1 ನಿ. 7.28 ಸೆ.)–1, ನಿಹಿತಾ ಸಾಹುಕಾರ್ (ಬೆಂಗಳೂರು)–2, ಲಿಷಿಕಾ (ಮೈಸೂರು)–3

ಕ್ವಾಡ್‌ (1000 ಮೀ.): 11–14 ವರ್ಷ: ಜಾಹ್ನವಿ ತೆಂಡೂಲ್ಕರ್ (ಬೆಳಗಾವಿ, 1 ನಿ. 34.72 ಸೆ.)–1, ಅನಘಾ ಜೋಷಿ (ಬೆಳಗಾವಿ)–2, ಹರ್ಷಿತಾ ವಿ. (ಮೈಸೂರು)–3

14–17 ವರ್ಷ: ಸಮಕ್ಯಾ ಎಸ್. ಅಡಿಗ (ಬೆಂಗಳೂರು, 1 ನಿ. 51.88 ಸೆ.)–1, ನಿಧಿ ಕುಲಕರ್ಣಿ (ಕಲಬುರಗಿ)–2

17 ವರ್ಷಕ್ಕಿಂತ ಮೇಲಿನವರು: ಡಿಂಪಲ್ ಎಸ್‌. ಗೌಡ (ಕಾಲ: 1 ನಿ. 50.94 ಸೆ.)–1, ಹರ್ಷಿತಾ–2 (ಇಬ್ಬರೂ ಬೆಂಗಳೂರು), ಶಾರ್ವರಿ ಸಲೋಕೆ (ಬೆಳಗಾವಿ)3

ಇನ್‌ಲೈನ್‌ (500 ಮೀ.):5–7 ವರ್ಷ: ಮುದ್ದಾನಾ ಕೌಶಿಕ್‌ (ಕಾಲ: 1 ನಿ. 11.06 ಸೆ.)–1, ಯುವಿಕಾ ರೆಡ್ಡಿ–2, ಅದಿತಿ ಮುರುವಲು–3 (ಎಲ್ಲರೂ ಬೆಂಗಳೂರು)

7–9 ವರ್ಷ: ತ್ರಿಷ್ನಿ ವಿ. (ಬೆಂಗಳೂರು, ಕಾಲ: 59.46 ಸೆ.)–1, ಆರ್ನಾ ರಾಜೇಶ್ (ದಕ್ಷಿಣ ಕನ್ನಡ)–2, ಹಿಮಾಣಿ ಕೆ.ವಿ. (ದ.ಕ)–3

9–11 ವರ್ಷ: ದ್ಯುತಿ ರಮೇಶಗೌಡ (ಕಾಲ: 1 ನಿ. 1.63 ಸೆ.)–1, ಶ್ರದ್ಧಾ ಎಂ.–2, ಮೋಕ್ಷಾ ರೆಡ್ಡಿ–3 (ಮೂವರೂ ಬೆಂಗಳೂರು)

11–14 ವರ್ಷ: ಜ್ಞಾನವಿ ರೆಡ್ಡಿ (ಬೆಂಗಳೂರು, ಕಾಲ: 2 ನಿ. 23.72 ಸೆ.)–1, ಅನಘಾ ರಾಜೇಶ್ (ದ.ಕ.)–2, ಕುಸುಮ್ ಎಸ್‌. ಗೌಡ (ಬೆಂಗಳೂರು)–3

14–17 ವರ್ಷ: ಪೂರ್ವಿ ಎಸ್‌. ಮಟ್ಟೆ (ಬೆಂಗಳೂರು, ಕಾಲ: 1 ನಿ. 41 ಸೆ.)–1, ಸಂಜನಾ (ಕಲಬುರಗಿ)–2, ಜಯಮಂಗಲ ಬಿ. (ಬೆಂಗಳೂರು)–3

17 ವರ್ಷಕ್ಕಿಂತ ಮೇಲಿನವರು: ಸಾಯಿ ಸಹನಾ ಎಸ್‌. (ಕಾಲ: 1 ನಿ. 46.66 ಸೆ.)–1, ತೇಜಸ್ವಿನಿ ವಿ.–2 (ಇಬ್ಬರೂ ಬೆಂಗಳೂರು), ನಿಧಿ ರೆಡ್ಡಿ (ಕಲಬುರಗಿ)–3

ಪಿಟಿಪಿ+ಎಲಿಮಿನೇಷನ್‌ (15,000 ಮೀ.)

14ರಿಂದ 17 ವರ್ಷ: ಪೂರ್ವಿ ಎಸ್‌. ಮಟ್ಟೆ (ಬೆಂಗಳೂರು)–1, ಸಂಜನಾ (ಕಲಬುರಗಿ)–2, ಸಹಸ್ರಾ (ಬೆಂಗಳೂರು)–3

17 ವರ್ಷಕ್ಕಿಂತ ಮೇಲಿನವರು: ಸಾಯಿ ಸಹನಾ–1, ತೇಜಸ್ವಿನಿ–2 (ಇಬ್ಬರೂ ಬೆಂಗಳೂರು), ನಿಧಿ ರೆಡ್ಡಿ (ಕಲಬುರಗಿ)–3

ಕಲಬುರಗಿ ಜಿಲ್ಲಾ ರೋಲರ್ ಸ್ಕೇಟಿಂಗ್ ಸಂಸ್ಥೆಯು ಕಲಬುರಗಿಯ ಮೂರನೇ ಹಂತದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿರುವ ರಾಜ್ಯ ರ‍್ಯಾಂಕಿಂಗ್‌ ಮೂರನೇ ರೋಲರ್ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನ ಇನ್‌ಲೈನ್‌ (500 ಮೀ.) 14ರಿಂದ 17 ವರ್ಷದೊಳಗಿನ ವಿಭಾಗದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿ ಜಿಲ್ಲಾ ರೋಲರ್ ಸ್ಕೇಟಿಂಗ್ ಸಂಸ್ಥೆಯು ಕಲಬುರಗಿಯ ಮೂರನೇ ಹಂತದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿರುವ ರಾಜ್ಯ ರ‍್ಯಾಂಕಿಂಗ್‌ ಮೂರನೇ ರೋಲರ್ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನ ಇನ್‌ಲೈನ್‌ (500 ಮೀ.) 14ರಿಂದ 17 ವರ್ಷದೊಳಗಿನ ವಿಭಾಗದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಜಿಲ್ಲಾ ರೋಲರ್‌ ಸ್ಕೇಟಿಂಗ್‌ ಸಂಸ್ಥೆ ಆಯೋಜಿಸಿರುವ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಇನ್‌ಲೈನ್‌ (500 ಮೀ.) ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌
ಕಲಬುರಗಿಯ ಜಿಲ್ಲಾ ರೋಲರ್‌ ಸ್ಕೇಟಿಂಗ್‌ ಸಂಸ್ಥೆ ಆಯೋಜಿಸಿರುವ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಇನ್‌ಲೈನ್‌ (500 ಮೀ.) ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT